‘ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ ರಾಕ್ಷಸರು ಮತ್ತು ಗಂಧರ್ವರ ಟಾಸ್ಕ್ ಸಖತ್ ಕಾವು ಪಡೆದುಕೊಂಡಿದೆ. ಈ ಟಾಸ್ಕ್ ವೇಳೆ ಸ್ಪರ್ಧಿ ಮಂಜು ಅವರ ವರ್ತನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅತಿಯಾದ ಅವಾಚ್ಯ ಶಬ್ದಗಳ ಬಳಕೆ, ಇತರ ಸ್ಪರ್ಧಿಯನ್ನು ನಿಂದಿಸಿದ್ದು ಹಾಗೂ ಬಿಗ್ ಬಾಸ್ ಮನೆಯ ಪ್ರಾಪರ್ಟಿಗೆ ಹಾನಿ ಮಾಡಿದ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಂಜು ಅವರನ್ನು ಈ ವಾರವೇ ಎಲಿಮಿನೇಟ್ ಮಾಡಲಾಗುತ್ತಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
ರಾಕ್ಷಸರು-ಗಂಧರ್ವರ ಟಾಸ್ಕ್ನಲ್ಲಿ ಶುರುವಾದ ಕಿರಿಕ್
ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಕ್ಷಸರು ಮತ್ತು ಗಂಧರ್ವರು ಎಂಬ ಟಾಸ್ಕ್ ನೀಡಲಾಗಿತ್ತು. ಆರಂಭದಲ್ಲಿ ಮಂಜು ರಾಕ್ಷಸರ ತಂಡದಲ್ಲಿದ್ದರೆ, ಯಶಸ್ ಗಂಧರ್ವರ ತಂಡದಲ್ಲಿದ್ದರು. ಈ ವೇಳೆ ಮಂಜು ಅವರು ಯಶಸ್ ಅವರನ್ನು ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’ ಎಂದು ಕರೆದಿದ್ದರು ಎನ್ನಲಾಗಿದೆ.
ಆ ಬಳಿಕ ತಂಡಗಳು ಬದಲಾದಾಗ ಯಶಸ್ ರಾಕ್ಷಸರ ತಂಡದಲ್ಲಿದ್ದರು. ಈ ವೇಳೆ ಅವರು ಮಂಜು ಅವರನ್ನು ಪದೇಪದೇ ‘ನಾಯಿ, ನಾಯಿ’ ಎಂದು ಹಂಗಿಸುತ್ತಿದ್ದರು. ಆರಂಭದಲ್ಲಿ ಸುಮ್ಮನಿದ್ದ ಮಂಜು, ಕೊನೆಗೆ ತಾಳ್ಮೆ ಕಳೆದುಕೊಂಡರು.
ಪ್ರಾಪರ್ಟಿ ಹಾನಿ, ಅವಾಚ್ಯ ಶಬ್ದಗಳ ಬಳಕೆ
ಟಾಸ್ಕ್ ವೇಳೆ ಮಂಜು ಆಕ್ರೋಶಗೊಂಡು ಬಿಗ್ ಬಾಸ್ ಮನೆಯ ಪ್ರಾಪರ್ಟಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಯಶಸ್ ಅವರನ್ನು ‘ಕಾಮುಕ’ ಎಂದು ಕರೆದಿದ್ದು, ನಂತರ ಅತಿಯಾದ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಮಂಜು ಅವರ ಮಾತುಗಳು ಯಾವ ಮಟ್ಟಕ್ಕೆ ತಲುಪಿದವು ಎಂದರೆ, ಕೆಲ ಸಮಯ ಕಾರ್ಯಕ್ರಮದಲ್ಲಿ ಬೀಪ್ ಶಬ್ದಗಳನ್ನು ಬಳಸಬೇಕಾಯಿತು ಎನ್ನಲಾಗಿದೆ. ಟಾಸ್ಕ್ ಮುಗಿದ ಬಳಿಕವೂ ಅವರ ಆಕ್ರೋಶ ಮುಂದುವರಿದಿತ್ತು ಎಂಬ ಮಾಹಿತಿ ಇದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಸುಪ್ರೀಂ ಕೋರ್ಟ್ನಲ್ಲೂ ದರ್ಶನ್ಗೆ ಶಾಕ್
ಮಂಜು ಅವರನ್ನು ಎಲಿಮಿನೇಟ್ ಮಾಡ್ತಾರಾ?
ಈ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಂಜು ಅವರ ವರ್ತನೆ ಬಗ್ಗೆ ಚರ್ಚೆ ಜೋರಾಗಿದೆ. ಟಾಸ್ಕ್ ವೇಳೆ ಇತರ ಸ್ಪರ್ಧಿಗಳನ್ನು ನಿಂದಿಸುವುದು ಮತ್ತು ಮನೆಯ ವಸ್ತುಗಳಿಗೆ ಹಾನಿ ಮಾಡುವುದನ್ನು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.
ಕೆಲವರು ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಮಂಜು ಅವರನ್ನು ಈ ವಾರವೇ ಎಲಿಮಿನೇಟ್ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಮಂಜು ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ ಅಥವಾ ಸುದೀಪ್ ವಿಶೇಷ ಅಧಿಕಾರ ಬಳಸುತ್ತಾರೆ ಎಂಬುದಕ್ಕೆ ಸದ್ಯಕ್ಕೆ ಅಧಿಕೃತ ದೃಢೀಕರಣವಿಲ್ಲ.
ಇದನ್ನೂ ಓದಿ: BBK 13: ರಾಜಿಯಾದ ಸೌಂದರ್ಯಾ-ಯಶಸ್
ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಈ ಘಟನೆ ಬಗ್ಗೆ ಏನು ಹೇಳುತ್ತಾರೆ? ಮಂಜು ಅವರಿಗೆ ಎಚ್ಚರಿಕೆ ನೀಡುತ್ತಾರಾ ಅಥವಾ ಬೇರೆಯದೇ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
One thought on “ಬಿಗ್ಬಾಸ್ ಮನೆಯಲ್ಲಿ ಕೆಟ್ಟ ಪದ ಬಳಕೆ- ಮನೆಯಿಂದ ಹೊರಗೆ ಹೋಗ್ತಾರಾ ಮಂಜ?”