Skip to content

NammaSuddi.com

NammaSuddi.com

  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
Close

Search

ದೇಶLatest

ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆಗೆ ಚಿನ್ನ..!

By Nammasuddi.com
August 2, 2026 1 Min Read
0

Gold: ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಹೂಡಿಕೆಯ ಒಂದು ಪ್ರಮುಖ ರೂಪವೂ ಆಗಿದೆ. ಮದುವೆ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚು. ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಖರೀದಿದಾರರು ಕಡಿಮೆ ಬೆಲೆಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ.

ಇದೇ ಕಾರಣಕ್ಕೆ ದೇಶದ ಕೆಲವು ಪ್ರಮುಖ ಸಗಟು ಚಿನ್ನದ ಮಾರುಕಟ್ಟೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ವ್ಯವಹಾರ ನಡೆಯುವುದರಿಂದ, ಹಲವು ಬಾರಿ ಶೋರೂಮ್‌ಗಳಿಗಿಂತ ಕಡಿಮೆ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಸಿಗುತ್ತದೆ.

ಮುಂಬೈನ ಜವೇರಿ ಬಜಾರ್ ದೇಶದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ವಿವಿಧ ವಿನ್ಯಾಸದ ಚಿನ್ನಾಭರಣಗಳು ಹಾಗೂ ಚಿನ್ನದ ಬಾರ್‌ಗಳು ಸಗಟು ದರದಲ್ಲಿ ಲಭ್ಯವಿರುತ್ತವೆ.

ದೆಹಲಿಯ ಕುಚಾ ಮಹಾಜನಿ ಪ್ರದೇಶವೂ ಚಿನ್ನದ ಖರೀದಿಗೆ ಪ್ರಸಿದ್ಧ. ವಿಶೇಷವಾಗಿ ಕುಂದನ್ ಹಾಗೂ ಮದುವೆ ಆಭರಣಗಳಿಗಾಗಿ ಈ ಮಾರುಕಟ್ಟೆಗೆ ದೇಶದ ಹಲವು ಭಾಗಗಳಿಂದ ಜನರು ಬರುತ್ತಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ಬದಲು ಸೀತೆಯಾಗಿ ಮಿಂಚಬೇಕಿದ್ದ ಈ ಕನ್ನಡದ ನಟಿ; ಚಾನ್ಸ್‌ ಕೈತಪ್ಪಿದ್ದು ಹೇಗೆ ಗೊತ್ತಾ?

ಜೈಪುರದ ಜೋಹಾರಿ ಬಜಾರ್, ಕೋಲ್ಕತ್ತಾದ ಬೋ ಬಜಾರ್ ಮತ್ತು ಬುರ್ರಾ ಬಜಾರ್ ಕೂಡ ಚಿನ್ನದ ವ್ಯಾಪಾರಕ್ಕೆ ಹೆಸರುವಾಸಿಯಾಗಿವೆ. ಜೋಹಾರಿ ಬಜಾರ್ ಕುಂದನ್ ಮತ್ತು ಮೀನಾಕಾರಿ ಆಭರಣಗಳಿಗೆ ಪ್ರಸಿದ್ಧವಾಗಿದ್ದರೆ, ಬೋ ಬಜಾರ್ ಬಂಗಾಳಿ ಶೈಲಿಯ ಫಿಲಿಗ್ರಿ ಆಭರಣಗಳಿಗೆ ಹೆಸರುವಾಸಿಯಾಗಿದೆ.

ದಕ್ಷಿಣ ಭಾರತದಲ್ಲಿ ಚೆನ್ನೈನ ಜಾರ್ಜ್ ಟೌನ್, ಕೊಯಮತ್ತೂರು, ಹೈದರಾಬಾದ್‌ನ ಬೇಗಂ ಬಜಾರ್, ಕೇರಳದ ತ್ರಿಶೂರ್ ಹಾಗೂ ಗುಜರಾತ್‌ನ ಮಾನೇಕ್ ಚೌಕ್ ಚಿನ್ನದ ಪ್ರಮುಖ ಮಾರುಕಟ್ಟೆಗಳಾಗಿವೆ. ಇಲ್ಲಿ ಚಿನ್ನಾಭರಣ, ಚಿನ್ನದ ಬಾರ್ ಮತ್ತು ನಾಣ್ಯಗಳನ್ನು ಖರೀದಿಸಬಹುದು.

ಇದನ್ನೂ ಓದಿ: ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ರಾಮಕೃಷ್ಣ ಆಶ್ರಮದಲ್ಲಿ ಬಿಲ್ವ ಸಸಿ ನೆಟ್ಟು ಪರಿಸರ ಸಂದೇಶ

ಈ ಮಾರುಕಟ್ಟೆಗಳಲ್ಲಿ ತಯಾರಿಕೆ ವೆಚ್ಚ (Making Charges) ಹಾಗೂ ಇತರೆ ಶುಲ್ಕಗಳು ಹಲವು ಬಾರಿ ಕಡಿಮೆಯಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ ದೊಡ್ಡ ಶೋರೂಮ್‌ಗಳಿಗೆ ಹೋಲಿಸಿದರೆ 30 ರಿಂದ 50 ಶೇಕಡಾವರೆಗೆ ಮೇಕಿಂಗ್ ಚಾರ್ಜ್‌ನಲ್ಲಿ ವ್ಯತ್ಯಾಸ ಇರಬಹುದು. ಆದರೆ ಚಿನ್ನ ಖರೀದಿಸುವಾಗ BIS ಹಾಲ್‌ಮಾರ್ಕ್, ಬಿಲ್ ಹಾಗೂ ಮಾರಾಟಗಾರರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.

Tags:

Gold BuyingGold MarketGold PriceIndia NewsJewellery Shopping
Author

Nammasuddi.com

Follow Me
Other Articles
Previous

ಸಾಯಿ ಪಲ್ಲವಿ ಬದಲು ಸೀತೆಯಾಗಿ ಮಿಂಚಬೇಕಿದ್ದ ಈ ಕನ್ನಡದ ನಟಿ; ಚಾನ್ಸ್‌ ಕೈತಪ್ಪಿದ್ದು ಹೇಗೆ ಗೊತ್ತಾ?

Next

ಪಾಕ್ ಭಯೋತ್ಪಾದಕರ‌ ಹಿಟ್‌ಲಿಸ್ಟ್‌ನಲ್ಲಿ ಬಂಗಾಳದ ಸಿಎಂ..! ಜಂತರ್ ಮಂತರ್‌ನಲ್ಲಿ ದಾಳಿಗೆ ನಡೆದಿತ್ತಾ ಸಂಚು?

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದ ವ್ಯಕ್ತಿ; 9 ವರ್ಷಗಳ ನಂತರ ಸಿಕ್ತು 1.36 ಲಕ್ಷ ರೂ. ಪರಿಹಾರ
  • ‘ಇದು ಐತಿಹಾಸಿಕ ಕ್ರಾಂತಿ’ – ತಂದೆ ವಿಜಯ್ ಗೆಲುವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜೇಸನ್
  • ಸೋನಾಕ್ಷಿ ವಿರುದ್ಧ ಕಂಗನಾ ಪರೋಕ್ಷ ಟೀಕೆ? ಧರ್ಮ, ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ
  • ವಿದ್ಯಾರ್ಥಿಗಳ ವಿರುದ್ಧ FIR ಇಲ್ಲ; ಪ್ರತಿಭಟನೆಗೆ ಬೆಂಬಲಿಸಿದವರಿಗೆ ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರದ ಸ್ಪಷ್ಟನೆ
  • ಡಿಕೆ ಸಂಪುಟ ವಿಸ್ತರಣೆ: 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

Recent Comments

No comments to show.