Skip to content

NammaSuddi.com

NammaSuddi.com

  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
Close

Search

Latestಸಿನಿಮಾ

ಸಾಯಿ ಪಲ್ಲವಿ ಬದಲು ಸೀತೆಯಾಗಿ ಮಿಂಚಬೇಕಿದ್ದ ಈ ಕನ್ನಡದ ನಟಿ; ಚಾನ್ಸ್‌ ಕೈತಪ್ಪಿದ್ದು ಹೇಗೆ ಗೊತ್ತಾ?

By Nammasuddi.com
August 2, 2026 1 Min Read
0

Ramayana Film: ಭಾರತದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. ಆದರೆ ಈ ಸಿನಿಮಾದಲ್ಲಿ ಸೀತೆಯ ಪಾತ್ರಕ್ಕಾಗಿ ಮೊದಲು ಕನ್ನಡದ ನಟಿಯೊಬ್ಬರು ಆಡಿಷನ್ ನೀಡಿದ್ದರು ಎಂಬ ಮಾಹಿತಿ ಮತ್ತೆ ಚರ್ಚೆಗೆ ಬಂದಿದೆ. ಆದರೆ ಕೊನೆಗೆ ಈ ಪಾತ್ರ ಸಾಯಿ ಪಲ್ಲವಿ ಕೈಸೇರಿತು.

ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ದೊಡ್ಡ ತಾರಾಗಣ ಇರುವ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ನಿರ್ಮಾಣ ವೆಚ್ಚ ಸುಮಾರು 4 ಸಾವಿರ ಕೋಟಿ ಎಂದು ವರದಿಯಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಅದ್ದೂರಿ ಮೇಕಿಂಗ್‌, ದೃಶ್ಯ ವೈಭವ ಮತ್ತು ಪಾತ್ರಗಳ ಲುಕ್‌ ಸಿನಿಪ್ರಿಯರ ಗಮನ ಸೆಳೆದಿದೆ.

ಈ ನಡುವೆ ಸೀತೆಯ ಪಾತ್ರದ ಬಗ್ಗೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಕೂಡ ಈ ಪಾತ್ರಕ್ಕಾಗಿ ಆಡಿಷನ್ ನೀಡಿದ್ದರು. ಈ ವಿಷಯವನ್ನು ಅವರು ಹಿಂದಿನ ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದರು. ಆದರೆ ಅಂತಿಮವಾಗಿ ಈ ಪಾತ್ರ ಅವರಿಗೆ ಸಿಗದೆ, ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ.

ಶ್ರೀನಿಧಿ ಶೆಟ್ಟಿ ಈ ಪಾತ್ರಕ್ಕೆ ಸೂಕ್ತ ಆಯ್ಕೆಯಾಗಬಹುದಿತ್ತು ಎಂದು ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಟ್ರೈಲರ್‌ನಲ್ಲಿ ಸಾಯಿ ಪಲ್ಲವಿ ಅವರ ಅಭಿನಯ ಮತ್ತು ಲುಕ್‌ಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

ಆದರೆ ಕೆಲವರು ಸಾಯಿ ಪಲ್ಲವಿ ಅವರ ಸೀತೆಯ ಪಾತ್ರದ ಆಯ್ಕೆ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಅವರ ಲುಕ್‌ ಮತ್ತು ಹೇರ್‌ಸ್ಟೈಲ್‌ ಕುರಿತು ಕೆಲ ಚರ್ಚೆಗಳು ನಡೆಯುತ್ತಿವೆ. ಆದರೂ ಸಿನಿಮಾ ಬಿಡುಗಡೆಯಾದ ಬಳಿಕವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎನ್ನುವುದು ಸಿನಿಪ್ರಿಯರ ಅಭಿಪ್ರಾಯ.

Tags:

Kannada CinemaRamayana MovieSai PallaviSrinidhi ShettyYash
Author

Nammasuddi.com

Follow Me
Other Articles
Previous

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ರಾಮಕೃಷ್ಣ ಆಶ್ರಮದಲ್ಲಿ ಬಿಲ್ವ ಸಸಿ ನೆಟ್ಟು ಪರಿಸರ ಸಂದೇಶ

Next

ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆಗೆ ಚಿನ್ನ..!

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದ ವ್ಯಕ್ತಿ; 9 ವರ್ಷಗಳ ನಂತರ ಸಿಕ್ತು 1.36 ಲಕ್ಷ ರೂ. ಪರಿಹಾರ
  • ‘ಇದು ಐತಿಹಾಸಿಕ ಕ್ರಾಂತಿ’ – ತಂದೆ ವಿಜಯ್ ಗೆಲುವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜೇಸನ್
  • ಸೋನಾಕ್ಷಿ ವಿರುದ್ಧ ಕಂಗನಾ ಪರೋಕ್ಷ ಟೀಕೆ? ಧರ್ಮ, ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ
  • ವಿದ್ಯಾರ್ಥಿಗಳ ವಿರುದ್ಧ FIR ಇಲ್ಲ; ಪ್ರತಿಭಟನೆಗೆ ಬೆಂಬಲಿಸಿದವರಿಗೆ ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರದ ಸ್ಪಷ್ಟನೆ
  • ಡಿಕೆ ಸಂಪುಟ ವಿಸ್ತರಣೆ: 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

Recent Comments

No comments to show.