Instagram ಓಪನ್ ಮಾಡಿ ಸ್ಕ್ರಾಲ್ ಮಾಡಿದ್ರೆ ಸಾಕು, ಈಗ ಎಲ್ಲೆಲ್ಲೂ 80ರ ದಶಕದ ಲುಕ್‌ನಲ್ಲಿರುವ ಫೋಟೋಗಳೇ ಕಾಣಿಸುತ್ತಿವೆ. ಹಳೆಯ ಸಿನಿಮಾ ಪೋಸ್ಟರ್, ವಿಂಟೇಜ್ ಮ್ಯಾಗಜೀನ್ ಕವರ್, ಬೋಲ್ಡ್ ಹೇರ್‌ಸ್ಟೈಲ್, ಕಲರ್‌ಫುಲ್ ಡ್ರೆಸ್… ಹೀಗೆ ಫುಲ್ ರೆಟ್ರೋ ಲುಕ್‌ನಲ್ಲಿ ಜನ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ AI 80s Photo Trend. AI ಇಮೇಜ್ ಜನರೇಷನ್ ಟೂಲ್‌ಗಳನ್ನು ಬಳಸಿ ಈಗಿನ ಫೋಟೋವನ್ನು 1980ರ ದಶಕದಲ್ಲಿ ತೆಗೆದ ಫೋಟೋದಂತೆ ಬದಲಾಯಿಸಿಕೊಳ್ಳಬಹುದು.
ಹೇಗಿರುತ್ತೆ ಈ 80s ಲುಕ್?
ನಿಮ್ಮ ಈಗಿನ ಫೋಟೋವನ್ನು AIಗೆ ಕೊಟ್ಟು 1980ರ ದಶಕದ ಸ್ಟೈಲ್‌ನಲ್ಲಿ ಮರುಸೃಷ್ಟಿಸಲು ಹೇಳಬಹುದು. ಅದರಲ್ಲಿ ದಟ್ಟವಾದ, ವಾಲ್ಯೂಮಿನಸ್ ಹೇರ್‌ಸ್ಟೈಲ್, ವಿಂಟೇಜ್ ಬಟ್ಟೆ, ಸ್ಟೇಟ್‌ಮೆಂಟ್ ಜ್ಯುವೆಲರಿ, ಹಳೆಯ ಕ್ಯಾಮೆರಾ ಫಿಲ್ಮ್‌ನ ಗ್ರೇನ್, ಸಾಫ್ಟ್ ಲೈಟಿಂಗ್ ಮತ್ತು ಕ್ಲಾಸಿಕ್ ಬ್ಯಾಕ್‌ಗ್ರೌಂಡ್‌ಗಳನ್ನು ಸೇರಿಸಬಹುದು.
ಕೆಲವರು ತಮ್ಮ ಫೋಟೋಗಳನ್ನು 80s ಬಾಲಿವುಡ್ ಸಿನಿಮಾ ಪೋಸ್ಟರ್ ಅಥವಾ ಹಳೆಯ ಮ್ಯಾಗಜೀನ್ ಕವರ್‌ನಂತೆ ಕೂಡ ಕ್ರಿಯೇಟ್ ಮಾಡುತ್ತಿದ್ದಾರೆ.
ಈ ಟ್ರೆಂಡ್‌ಗೆ ಪ್ರಮುಖ ಕಾರಣಗಳಲ್ಲಿ ಒಂದು ನಾಸ್ಟಾಲ್ಜಿಯಾ. ಹಳೆಯ ಕಾಲದ ಫ್ಯಾಷನ್ ಮತ್ತು ಸಿನಿಮಾಗಳ ಲುಕ್‌ನ್ನು ಇಂದಿನ ಫೋಟೋಗಳಲ್ಲಿ ನೋಡಿಕೊಳ್ಳುವ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ.
ಇದರ ಜೊತೆಗೆ AI ಟೂಲ್‌ಗಳು ಸುಲಭವಾಗಿ ಲಭ್ಯವಾಗುತ್ತಿರುವುದರಿಂದ ಸಾಮಾನ್ಯ ಫೋಟೋವನ್ನೇ ಕೆಲವೇ ನಿಮಿಷಗಳಲ್ಲಿ ವಿಭಿನ್ನ ಲುಕ್‌ಗೆ ಬದಲಾಯಿಸಿಕೊಳ್ಳಬಹುದು.
Instagramನಲ್ಲೂ ಫುಲ್ ಟ್ರೆಂಡ್!
AIನಲ್ಲಿ ರೆಟ್ರೋ ಲುಕ್ ಕ್ರಿಯೇಟ್ ಮಾಡಿಕೊಂಡ ಬಳಿಕ ಅದನ್ನು Instagram Reels ಮತ್ತು “Add Yours” ಸ್ಟಿಕ್ಕರ್ ಮೂಲಕ ಶೇರ್ ಮಾಡಲಾಗುತ್ತಿದೆ. ಹೀಗಾಗಿ ಒಬ್ಬರ ಫೋಟೋ ನೋಡಿ ಮತ್ತೊಬ್ಬರು ಕೂಡ ತಮ್ಮ 80s ವರ್ಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ಈ ಹಿಂದೆ Ghibli-style ಪೋರ್ಟ್ರೇಟ್ ಮತ್ತು AI caricatureಗಳು ವೈರಲ್ ಆಗಿದ್ದಂತೆ, ಇದೀಗ 80s ರೆಟ್ರೋ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ನಿಮ್ಮ ಫೋಟೋವನ್ನು 80s ಲುಕ್‌ಗೆ ಬದಲಾಯಿಸೋದು ಹೇಗೆ?
ಇದಕ್ಕಾಗಿ ಯಾವುದೇ ದೊಡ್ಡ ಎಡಿಟಿಂಗ್ ಸ್ಕಿಲ್ ಬೇಕಾಗಿಲ್ಲ.
1. ChatGPT ಓಪನ್ ಮಾಡಿ ಹೊಸ ಚಾಟ್ ಆರಂಭಿಸಿ.
2. + ಐಕಾನ್ ಒತ್ತಿ ನಿಮ್ಮ ಸ್ಪಷ್ಟವಾದ ಫೋಟೋ ಅಪ್‌ಲೋಡ್ ಮಾಡಿ.
3. ಉತ್ತಮ ಲೈಟಿಂಗ್ ಇರುವ, ಮುಖ ಸ್ಪಷ್ಟವಾಗಿ ಕಾಣುವ ಫೋಟೋ ಬಳಸುವುದು ಉತ್ತಮ.
4. ನಿಮಗೆ ಬೇಕಾದ 80s ಹೇರ್‌ಸ್ಟೈಲ್, ಡ್ರೆಸ್, ಆಭರಣ, ಬ್ಯಾಕ್‌ಗ್ರೌಂಡ್ ಮತ್ತು ಲೈಟಿಂಗ್ ಬಗ್ಗೆ promptನಲ್ಲಿ ತಿಳಿಸಿ.
5. ನಿಮ್ಮ ಮುಖದ ಮೂಲ features ಮತ್ತು natural skin tone ಬದಲಾಗಬಾರದು ಎಂದು ಸ್ಪಷ್ಟವಾಗಿ ಹೇಳಿ.
6. ಚಿತ್ರ ಬಂದ ಬಳಿಕ ಏನಾದರೂ ಇಷ್ಟವಾಗದಿದ್ದರೆ ಅದನ್ನೇ ಸರಿಪಡಿಸುವಂತೆ ಮತ್ತೆ prompt ನೀಡಬಹುದು.
ಈ Prompt ಬಳಸಿ!
ನಿಮ್ಮ ಫೋಟೋ ಅಪ್‌ಲೋಡ್ ಮಾಡಿ ಈ prompt ಹಾಕಿ:
“Reimagine this image as a glamorous 1980s Indian film portrait. Retain the subject’s recognisable facial features and natural skin tone. Add voluminous, softly curled hair, a bold and colourful outfit, statement jewellery, warm studio-style lighting, rich cinematic tones and a subtle vintage film grain. Ensure the final image looks realistic, polished and elegant.”
Sandalwood 80s ಲುಕ್ ಬೇಕಾದ್ರೆ?
ಕನ್ನಡ ಸಿನಿಮಾದ 80s ಕಾಲದ ಫೋಟೋ ರೀತಿಯ ಲುಕ್ ಬೇಕಿದ್ದರೆ ಈ prompt ಬಳಸಬಹುದು:
“Transform this photo into an authentic 1980s Sandalwood studio portrait. Keep my facial features and identity recognisable. Give me period-appropriate 1980s Indian clothing, hairstyle and accessories, with warm studio lighting, soft focus, subtle film grain and slightly faded colours. Make it look like a real photograph taken in India in the 1980s, not a modern photo with a vintage filter. Do not change my facial structure or make me look like a different person. Keep the result photorealistic. Avoid excessive vintage effects, sepia tones or artificial-looking ageing. The photograph should look naturally shot on an analogue camera in the 1980s.”
ಹೀಗೆ ನಿಮ್ಮ ಇಂದಿನ ಫೋಟೋವನ್ನೇ 80s ಕಾಲದ ಸಿನಿಮಾ ಸ್ಟಾರ್ ಲುಕ್ನಲ್ಲಿ ನೋಡಿಕೊಳ್ಳಬಹುದು. ನಿಮ್ಮ ಫೋಟೋ ಕೂಡ Instagramನಲ್ಲಿ ಟ್ರೆಂಡ್ ಆಗುತ್ತಿರುವ ಈ ರೆಟ್ರೋ ಕ್ರೇಜ್‌ಗೆ ಸೇರಿಸಿಕೊಳ್ಳಬಹುದು!