ತಿರುಮಲದಲ್ಲಿ ಮುಡಿ ಕೊಟ್ಟ ಹಾರ್ದಿಕ್‌ ಪಾಂಡ್ಯ? ಗೆಳತಿ ಜೊತೆ ತಿಮ್ಮಪ್ಪನಿಗೆ ವಿಶೇಷ ಪೂಜೆ

ತಿರುಪತಿ: ಟೀಮ್ ಇಂಡಿಯಾದ (Team India) ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು ಹರಕೆ ತೀರಿಸಿರುವ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದೇವರ ದರ್ಶನದ ಬಳಿಕ ಹಾರ್ದಿಕ್ ಪಾಂಡ್ಯ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು. ತಿರುಮಲದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ಅಥವಾ ಆಶೀರ್ವಾದಕ್ಕಾಗಿ ತಲಾನಿಲ ಅರ್ಪಿಸುವುದು ಸಂಪ್ರದಾಯ. ಅದೇ ಸಂಪ್ರದಾಯವನ್ನು ಪಾಂಡ್ಯ ಕೂಡ ಪಾಲಿಸಿದ್ದಾರೆ.

ಹಾರ್ದಿಕ್ ಯಾವ ಹರಕೆ ಹೊತ್ತಿದ್ದರು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಮತ್ತು ಕ್ರಿಕೆಟ್ ಜೀವನದಲ್ಲಿ ಯಶಸ್ಸಿಗಾಗಿ ಅವರು ಈ ಹರಕೆ ತೀರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಪಾಕ್ ಭಯೋತ್ಪಾದಕರ‌ ಹಿಟ್‌ಲಿಸ್ಟ್‌ನಲ್ಲಿ ಬಂಗಾಳದ ಸಿಎಂ..! ಜಂತರ್ ಮಂತರ್‌ನಲ್ಲಿ ದಾಳಿಗೆ ನಡೆದಿತ್ತಾ ಸಂಚು?

ಇನ್ನೊಂದೆಡೆ, ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಭವಿಷ್ಯವೂ ಚರ್ಚೆಯ ವಿಷಯವಾಗಿದೆ. ಮುಂಬರುವ ಟ್ರೇಡ್ ವಿಂಡೋಗೆ ಮುನ್ನ ಅವರು ಮುಂಬೈ ಇಂಡಿಯನ್ಸ್‌ನಲ್ಲೇ ಮುಂದುವರಿಯುತ್ತಾರೋ ಅಥವಾ ಬೇರೆ ತಂಡಕ್ಕೆ ಹೋಗುತ್ತಾರೋ ಎಂಬ ಕುತೂಹಲ ಹೆಚ್ಚಾಗಿದೆ.

ಕೆಲವು ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ ಎನ್ನಲಾಗಿದೆ. ಆಟಗಾರರ ವಿನಿಮಯ ಹಾಗೂ ನಗದು ಪರಿಹಾರದ ಬಗ್ಗೆ ಚರ್ಚೆ ನಡೆದಿರುವ ಮಾತುಗಳೂ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಬಿಸಿಸಿಐ, ಐಪಿಎಲ್ ಅಥವಾ ಯಾವುದೇ ಫ್ರಾಂಚೈಸಿಯಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇದರ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಹಾರ್ದಿಕ್ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿವೆ ಎನ್ನುವ ವರದಿಗಳಿವೆ. ಟ್ರೇಡ್ ವಿಂಡೋ ಆರಂಭವಾದ ಬಳಿಕವೇ ಹಾರ್ದಿಕ್ ಅವರ ಐಪಿಎಲ್ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ: ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆಗೆ ಚಿನ್ನ..!

Leave a Reply

Your email address will not be published. Required fields are marked *