ಅನನ್ಯಾ ಪಾಂಡೆ-ವಾಕರ್ ಬ್ಲಾಂಕೊ ಬ್ರೇಕಪ್? ಬಾಲಿವುಡ್‌ನಲ್ಲಿ ಮತ್ತೆ ಲವ್‌ಲೈಫ್‌ ಚರ್ಚೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾ ವಿಚಾರಕ್ಕಿಂತಲೂ ತಮ್ಮ ಲವ್‌ ಲೈಫ್‌ ಕಾರಣಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೊಂದು ಸುದ್ದಿ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.

ನಟ ಆದಿತ್ಯ ರಾಯ್ ಕಪೂರ್ ಜೊತೆಗಿನ ಸಂಬಂಧದ ಬಳಿಕ ಅನನ್ಯಾ, ಅಮೆರಿಕ ಮೂಲದ ಮಾಡೆಲ್ ವಾಕರ್ ಬ್ಲಾಂಕೊ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇವರಿಬ್ಬರೂ ಕೂಡ ಬೇರೆಯಾಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ಮೂಲಗಳ ಪ್ರಕಾರ, ಅನನ್ಯಾ ಮತ್ತು ವಾಕರ್ ಕಳೆದ ವಾರವೇ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಬೇರೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅನನ್ಯಾ ಅಥವಾ ವಾಕರ್ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ವಾಕರ್ ಬ್ಲಾಂಕೊ ಜೊತೆಗಿನ ಅನನ್ಯಾ ಸಂಬಂಧದ ಬಗ್ಗೆ ಈ ಹಿಂದೆಯೂ ಸಾಕಷ್ಟು ಚರ್ಚೆಯಾಗಿತ್ತು. ಅನನ್ಯಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಾಕರ್ “ಆನೀ, ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಎನ್ನಲಾಗಿತ್ತು. ಈ ಪೋಸ್ಟ್‌ ಬಳಿಕ ಇಬ್ಬರ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಸುದ್ದಿಗಳು ಹರಿದಾಡಿದ್ದವು.

ಸುಮಾರು ಎರಡು ವರ್ಷಗಳಿಂದ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ಇದೀಗ ಇದೇ ಸಂಬಂಧವೂ ಮುರಿದುಬಿದ್ದಿದೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಇದಕ್ಕೂ ಮುನ್ನ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಸುಮಾರು ಎರಡು ವರ್ಷಗಳ ಬಳಿಕ ಇವರಿಬ್ಬರ ಸಂಬಂಧ ಕೂಡ ಕೊನೆಯಾಗಿತ್ತು.

ಸದ್ಯ ವಾಕರ್ ಬ್ಲಾಂಕೊ ಜೊತೆಗಿನ ಬ್ರೇಕಪ್‌ ಸುದ್ದಿ ನಿಜವೇ ಅಥವಾ ಕೇವಲ ವದಂತಿಯೇ ಎಂಬುದು ಸ್ಪಷ್ಟವಾಗಿಲ್ಲ. ಅನನ್ಯಾ ಕಡೆಯಿಂದ ಅಧಿಕೃತ ಮಾಹಿತಿ ಹೊರಬಂದ ಬಳಿಕವಷ್ಟೇ ಈ ಬಗ್ಗೆ ಖಚಿತ ಚಿತ್ರಣ ಸಿಗಲಿದೆ.

Leave a Reply

Your email address will not be published. Required fields are marked *