ರಹಸ್ಯವಾಗಿ ಮದುವೆಯಾದ ಭಾರತೀಯ ಕ್ರಿಕೆಟರ್‌; ಫೋಟೋ ವೈರಲ್

 ಭಾರತದ ಯುವ ಕ್ರಿಕೆಟಿಗ ಹಾಗೂ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುವ ಆಲ್‌ರೌಂಡರ್ ರಮಣದೀಪ್ ಸಿಂಗ್ ರಹಸ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಟಿವಿ ನಟಿ ಚಾರ್ಲಿ ಚೌಹಾಣ್ ಅವರನ್ನು ಆಗಸ್ಟ್ 7ರಂದು ರಮಣದೀಪ್ ವಿವಾಹವಾಗಿದ್ದಾರೆ. ಮದುವೆಯ ಫೋಟೋಗಳನ್ನು ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕವೇ ಈ ವಿಚಾರ ಬಹಿರಂಗವಾಗಿದೆ.

ತೀರ ಖಾಸಗಿಯಾಗಿ ನಡೆದ ಈ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಕೆಲ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ಗುರುದ್ವಾರದಲ್ಲಿ ಸಾಂಪ್ರದಾಯಿಕ ಪಂಜಾಬಿ ಸಂಪ್ರದಾಯದಂತೆ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ.

ಮದುವೆ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರ ಅರ್ಷದೀಪ್ ಸಿಂಗ್ ಸೇರಿದಂತೆ ನಮನ್ ಧೀರ್, ಅಶ್ವಿನಿ ಕುಮಾರ್ ಹಾಗೂ ಪಂಜಾಬ್ ಕ್ರಿಕೆಟಿಗ ಜಸಿಂದರ್ ಸಿಂಗ್ ಕೂಡ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ರಮಣದೀಪ್ ಕ್ರಿಕೆಟ್‌ ಜರ್ನಿ

ರಮಣದೀಪ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಪರ ಆಡುತ್ತಿದ್ದಾರೆ. 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. 2024ರಲ್ಲಿ ಕೆಕೆಆರ್ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು.

ಇದುವರೆಗೆ 38 ಐಪಿಎಲ್ ಪಂದ್ಯಗಳಲ್ಲಿ ರಮಣದೀಪ್ 299 ರನ್ ಗಳಿಸಿದ್ದು, 7 ವಿಕೆಟ್ ಪಡೆದಿದ್ದಾರೆ. ಭಾರತ ಪರ ಎರಡು ಟಿ20 ಪಂದ್ಯಗಳನ್ನೂ ಆಡಿದ್ದು, 15 ರನ್ ಹಾಗೂ ಒಂದು ವಿಕೆಟ್ ಪಡೆದಿದ್ದಾರೆ.

 

Leave a Reply

Your email address will not be published. Required fields are marked *