ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. ಇದೇ ವೇಳೆ ದೇಶದ ಧಾರ್ಮಿಕ ಸ್ಥಳಗಳು ಹಾಗೂ ಕುಟುಂಬಗಳ ಬಳಿ ಎಷ್ಟು ಚಿನ್ನ ಇದೆ ಎಂಬ ಬಗ್ಗೆ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದೂ ಸ್ಪಷ್ಟಪಡಿಸಿದೆ.
ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಜೂನ್ 26, 2026ರ ಅಂಕಿಅಂಶಗಳ ಪ್ರಕಾರ RBI ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಾರ್ಚ್ 31, 2025ರ ವೇಳೆಗೆ RBI ಬಳಿ 879.58 ಮೆಟ್ರಿಕ್ ಟನ್ ಚಿನ್ನ ಇತ್ತು. 2024ರ ಮಾರ್ಚ್ 31ರಂದು ಈ ಪ್ರಮಾಣ 822.10 ಮೆಟ್ರಿಕ್ ಟನ್ ಆಗಿತ್ತು. ಕಳೆದ ಎರಡು ವರ್ಷಗಳಲ್ಲಿ RBI ತನ್ನ ಚಿನ್ನದ ಸಂಗ್ರಹವನ್ನು ಹೆಚ್ಚಿಸಿಕೊಂಡಿರುವುದು ಈ ಅಂಕಿಅಂಶಗಳಿಂದ ಗೊತ್ತಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ರಾಮಕೃಷ್ಣ ಆಶ್ರಮದಲ್ಲಿ ಬಿಲ್ವ ಸಸಿ ನೆಟ್ಟು ಪರಿಸರ ಸಂದೇಶ
ಇನ್ನೊಂದೆಡೆ, ದೇಶೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಬಲಗೊಂಡಿರುವುದರಿಂದ ಚಿನ್ನ ಮತ್ತು ಬೆಳ್ಳಿ ಆಮದು ವೆಚ್ಚ ಕಡಿಮೆಯಾಗಿದೆ ಎಂದು ಚಿನ್ನದ ವ್ಯಾಪಾರಿಗಳು ತಿಳಿಸಿದ್ದಾರೆ. ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.
ಅಮೆರಿಕದ ಫೆಡ್ ರಿಸರ್ವ್ ಹಣಕಾಸು ನೀತಿ ಘೋಷಣೆಗೆ ಮುನ್ನ ಹೂಡಿಕೆದಾರರು ಎಚ್ಚರಿಕೆಯಿಂದ ಇದ್ದಾರೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಸಂಶೋಧನಾ ವಿಶ್ಲೇಷಕ ಸೌಮಿಲ್ ಗಾಂಧಿ, ರೂಪಾಯಿ ಬಲಗೊಳ್ಳುತ್ತಿರುವ ಪರಿಣಾಮ ಚಿನ್ನದ ಬೆಲೆ ಮೇಲೆ ಒತ್ತಡ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆಗೆ ಚಿನ್ನ..!