Kangana Ranaut: Gen-Zಗಳನ್ನು ‘ಗಟರ್ ಜನರೇಷನ್’ ಎಂದು ಕರೆದಿದ್ದಕ್ಕಾಗಿ ಭಾರಿ ಟೀಕೆಗೆ ಗುರಿಯಾಗಿದ್ದ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಫ್ರೆಂಡ್‌ಶಿಪ್ ಡೇ ಪ್ರಯುಕ್ತ Gen-Z ಶುಭಾಶಯ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ, ಇತ್ತೀಚೆಗೆ ಜಿಮ್‌ನಲ್ಲಿ ಇಬ್ಬರು Gen-Z ಯುವತಿಯರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಡಿಜಿಟಲ್ ಯುಗದಲ್ಲಿ ಬೆಳೆದಿರುವ ಕಾರಣ ಇನ್‌ಸ್ಟಾಗ್ರಾಮ್, ಡೇಟಿಂಗ್ ಆ್ಯಪ್‌ಗಳು, AI ಸೇರಿದಂತೆ ಹಲವು ತಂತ್ರಜ್ಞಾನಗಳು ತಮ್ಮ ಜೀವನದ ಭಾಗವಾಗಿವೆ ಎಂದು ಅವರು ಹೇಳಿದ್ದರು ಎಂದು ಕಂಗನಾ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ತಮ್ಮ ಇಷ್ಟದಂತೆ ಬದುಕುವ ಹಕ್ಕು ಹೊಂದಿದ್ದಾರೆ. ಆದರೆ ಸ್ವಾತಂತ್ರ್ಯದ ಜೊತೆಗೆ ಹೊಣೆಗಾರಿಕೆಯೂ ಇರಬೇಕು ಎಂದು ತಾವು ಹೇಳಿದ್ದಾಗಿ ತಿಳಿಸಿದ್ದಾರೆ. ಕೊನೆಗೆ ಯುವತಿಯರೂ ಈ ಮಾತಿಗೆ ಒಪ್ಪಿಕೊಂಡರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೇವಲ 3 ನಿಮಿಷದಲ್ಲಿ ಸೋಲ್ಡ್ ಔಟ್! ರಾಯಲ್ ಎನ್‌ಫೀಲ್ಡ್‌ನ ಈ ಬೈಕ್‌ಗೆ ಹೆಚ್ಚಾಯ್ತು ಕ್ರೇಜ್
ಇದೇ ವೇಳೆ ಇತ್ತೀಚೆಗೆ ನಡೆದ ಕೆಲವು ಹಿಂಸಾತ್ಮಕ ಘಟನೆಗಳನ್ನು ಉಲ್ಲೇಖಿಸಿದ ಕಂಗನಾ, ಇಂತಹ ಪ್ರಕರಣಗಳು ಸಮಾಜದಲ್ಲಿ ಚಿಂತೆಗೆ ಕಾರಣವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಾರವಾದಿ ಮತ್ತು ಸಂಪ್ರದಾಯವಾದಿ ಜೀವನಶೈಲಿಗಳ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಕೂಡ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಕೊನೆಯಲ್ಲಿ, ʼನನ್ನ ಜೆನ್-ಝಡ್ ಸ್ನೇಹಿತರಿಗೆ ಫ್ರೆಂಡ್‌ಶಿಪ್ ಡೇ ಶುಭಾಶಯಗಳು. ಶಾಂತಿಯಿಂದಿರಿʼ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ Gen-Z ಯುವಕರನ್ನು ‘ಗಟರ್ ಜನರೇಷನ್’ ಎಂದು ಕರೆದಿದ್ದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಹೃತಿಕ್ ರೋಷನ್ ಜೊತೆಗಿನ ಹಳೆಯ ವಿವಾದವೂ ಮತ್ತೆ ಚರ್ಚೆಗೆ ಬಂದಿತ್ತು.
ಇದನ್ನೂ ಓದಿ: ಪಾಕ್ ಭಯೋತ್ಪಾದಕರ ಹಿಟ್‌ಲಿಸ್ಟ್‌ನಲ್ಲಿ ಬಂಗಾಳದ ಸಿಎಂ..! ಜಂತರ್ ಮಂತರ್‌ನಲ್ಲಿ ದಾಳಿಗೆ ನಡೆದಿತ್ತಾ ಸಂಚು?