Skip to content

NammaSuddi.com

NammaSuddi.com

  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
Close

Search

Latestದೇಶರಾಜಕೀಯ

ಪಾಕ್ ಭಯೋತ್ಪಾದಕರ‌ ಹಿಟ್‌ಲಿಸ್ಟ್‌ನಲ್ಲಿ ಬಂಗಾಳದ ಸಿಎಂ..! ಜಂತರ್ ಮಂತರ್‌ನಲ್ಲಿ ದಾಳಿಗೆ ನಡೆದಿತ್ತಾ ಸಂಚು?

By Nammasuddi.com
August 2, 2026 1 Min Read
0

West Bengal: ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕ ಸಂಚು ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಶೇಷ ಕಾರ್ಯಪಡೆ (STF) ಇಬ್ಬರು ಶಂಕಿತರನ್ನು ಬಂಧಿಸಿದ್ದು, ಅವರು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಬಗ್ಗೆ ಮಾಹಿತಿ ಕಲೆಹಾಕುವುದು ಹಾಗೂ ದೆಹಲಿಯ ಜಂತರ್‌ ಮಂತರ್‌ನಲ್ಲಿ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ (STF) ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇವರಿಗೆ ಪಾಕಿಸ್ತಾನದಲ್ಲಿದ್ದ ಕೆಲ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆ ಚಿನ್ನ

ಈ ಪ್ರಕರಣದ ತನಿಖೆ ಹೌರಾದ ಸಚಿವರೊಬ್ಬರಿಗೆ ಬಂದಿದ್ದ ಸುಲಿಗೆ ಬೆದರಿಕೆ ಮತ್ತು ಅವರ ಮಗನನ್ನು ಅಪಹರಿಸುವ ಸಂಚಿನ ಆರೋಪದ ಬಳಿಕ ಆರಂಭವಾಗಿತ್ತು. ತನಿಖೆ ವೇಳೆ ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಕಾರ್ಯನಿರ್ವಹಿಸುತ್ತಿದ್ದ ಅನುಮಾನಾಸ್ಪದ ಸಾಮಾಜಿಕ ಜಾಲತಾಣ ಖಾತೆ ಪೊಲೀಸರ ಗಮನಕ್ಕೆ ಬಂದಿದೆ.

ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಬುರ್ದ್ವಾನ್‌ನ ಹಮೀಮ್ ಮಂಡಲ್ ಎಂಬಾತನ ಹೆಸರು ಬೆಳಕಿಗೆ ಬಂದಿದೆ. ಆತನ ಮೊಬೈಲ್‌, ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಚಾಟ್‌ಗಳನ್ನು ಪರಿಶೀಲಿಸಿದಾಗ, ಪಾಕಿಸ್ತಾನ ಮೂಲದ ಕೆಲ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಸಿಕ್ಕಿದೆ ಎಂದು ಎಸ್‌ಟಿಎಫ್ ಹೇಳಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ಬದಲು ಸೀತೆಯಾಗಿ ಮಿಂಚಬೇಕಿದ್ದ ಈ ಕನ್ನಡದ ನಟಿ; ಚಾನ್ಸ್‌ ಕೈತಪ್ಪಿದ್ದು ಹೇಗೆ ಗೊತ್ತಾ?

ಸಿಎಂ ಬಗ್ಗೆ ಮಾಹಿತಿ ಕಲೆಹಾಕಲು ಸೂಚನೆ?
ತನಿಖೆಯ ಪ್ರಕಾರ, ಬಂಗಾಳ ಸಿಎಂ ಸುವೇಂದು ಅಧಿಕಾರಿ ಅವರ ಸಂಚಾರ, ಭದ್ರತೆ ಹಾಗೂ ಬೆಂಗಾವಲು ಬಗ್ಗೆ ಮಾಹಿತಿ ಕಲೆಹಾಕುವಂತೆ ಆರೋಪಿಗಳಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಈ ಮಾಹಿತಿಯನ್ನು ಪಾಕಿಸ್ತಾನದಲ್ಲಿದ್ದ ಹ್ಯಾಂಡ್ಲರ್‌ಗಳಿಗೆ ಕಳುಹಿಸುವಂತೆ ಹೇಳಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.

ಸಿಎಂ ಬಗ್ಗೆ ಮಾಹಿತಿ ಕಲೆಹಾಕಲು ಸೂಚನೆ?
ತನಿಖೆಯಲ್ಲಿ ಮತ್ತೊಂದು ಆತಂಕಕಾರಿ ಮಾಹಿತಿ ಕೂಡ ಹೊರಬಂದಿದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಜನರ ನಡುವೆ ನುಸುಳಿ ಗಲಭೆ ಸೃಷ್ಟಿಸುವ ಸಂಚು ರೂಪಿಸಲಾಗಿತ್ತು ಎಂದು ಎಸ್‌ಟಿಎಫ್ ತಿಳಿಸಿದೆ. ಇದಕ್ಕಾಗಿ ಪೊಲೀಸ್ ಸಮವಸ್ತ್ರಗಳನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಎಸ್‌ಟಿಎಫ್, ಈ ಜಾಲದಲ್ಲಿ ಇನ್ನೂ ಯಾರೆಲ್ಲ ಇದ್ದಾರೆ, ಅವರಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರ ನೆರವು ಎಲ್ಲಿಂದ ಸಿಕ್ಕಿತ್ತು ಎಂಬ ಬಗ್ಗೆ ತನಿಖೆ ಮುಂದುವರಿಸಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.

Tags:

India NewsJantar MantarSuvendu AdhikariTerror PlotWest Bengal STF
Author

Nammasuddi.com

Follow Me
Other Articles
Previous

ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆಗೆ ಚಿನ್ನ..!

Next

ಕೇವಲ 3 ನಿಮಿಷದಲ್ಲಿ ಸೋಲ್ಡ್ ಔಟ್! ರಾಯಲ್ ಎನ್‌ಫೀಲ್ಡ್‌ನ ಈ ಬೈಕ್‌ಗೆ ಹೆಚ್ಚಾಯ್ತು ಕ್ರೇಜ್‌

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದ ವ್ಯಕ್ತಿ; 9 ವರ್ಷಗಳ ನಂತರ ಸಿಕ್ತು 1.36 ಲಕ್ಷ ರೂ. ಪರಿಹಾರ
  • ‘ಇದು ಐತಿಹಾಸಿಕ ಕ್ರಾಂತಿ’ – ತಂದೆ ವಿಜಯ್ ಗೆಲುವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜೇಸನ್
  • ಸೋನಾಕ್ಷಿ ವಿರುದ್ಧ ಕಂಗನಾ ಪರೋಕ್ಷ ಟೀಕೆ? ಧರ್ಮ, ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ
  • ವಿದ್ಯಾರ್ಥಿಗಳ ವಿರುದ್ಧ FIR ಇಲ್ಲ; ಪ್ರತಿಭಟನೆಗೆ ಬೆಂಬಲಿಸಿದವರಿಗೆ ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರದ ಸ್ಪಷ್ಟನೆ
  • ಡಿಕೆ ಸಂಪುಟ ವಿಸ್ತರಣೆ: 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

Recent Comments

No comments to show.