Skip to content

NammaSuddi.com

NammaSuddi.com

  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
Close

Search

Latestತಂತ್ರಜ್ಞಾನವ್ಯಾಪಾರ

ಕೇವಲ 3 ನಿಮಿಷದಲ್ಲಿ ಸೋಲ್ಡ್ ಔಟ್! ರಾಯಲ್ ಎನ್‌ಫೀಲ್ಡ್‌ನ ಈ ಬೈಕ್‌ಗೆ ಹೆಚ್ಚಾಯ್ತು ಕ್ರೇಜ್‌

By Chaitrabindu BIshetty
August 2, 2026 1 Min Read
0

Royal Enfield: ರಾಯಲ್ ಎನ್‌ಫೀಲ್ಡ್‌ನ ಲಿಮಿಟೆಡ್ ಎಡಿಷನ್ Shotgun 650 X Rough Crafts ಬೈಕ್ ಭಾರೀ ಕ್ರೇಜ್ ಸೃಷ್ಟಿಸಿದೆ. ಭಾರತದಲ್ಲಿ ಮಾರಾಟಕ್ಕೆ ಬಂದಿದ್ದ ಎಲ್ಲಾ 25 ಯೂನಿಟ್‌ಗಳು ಕೇವಲ 3 ನಿಮಿಷಗಳಲ್ಲಿ ಬುಕ್ ಆಗಿದ್ದು, ಕಂಪನಿಯ ಹೊಸ ದಾಖಲೆಯಾಗಿದೆ.

ರಾಯಲ್ ಎನ್‌ಫೀಲ್ಡ್ ತನ್ನ ಅತ್ಯಂತ ಪ್ರೀಮಿಯಂ ಮತ್ತು ಲಿಮಿಟೆಡ್ ಎಡಿಷನ್ ಬೈಕ್ Shotgun 650 X Rough Crafts ಅನ್ನು ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬುಕಿಂಗ್ ಆರಂಭವಾದ ಕೇವಲ 3 ನಿಮಿಷಗಳಲ್ಲಿ ಭಾರತಕ್ಕೆ ಮೀಸಲಾಗಿದ್ದ ಎಲ್ಲಾ 25 ಯೂನಿಟ್‌ಗಳು ಮಾರಾಟವಾಗಿವೆ.

ಈ ವಿಶೇಷ ಆವೃತ್ತಿಯ ಬೈಕ್ ವಿಶ್ವದಾದ್ಯಂತ ಕೇವಲ 100 ಯೂನಿಟ್‌ಗಳಲ್ಲಿ ಮಾತ್ರ ತಯಾರಿಸಲಾಗಿದೆ. ಅದರಲ್ಲಿ 25 ಯೂನಿಟ್‌ಗಳು ಭಾರತಕ್ಕೆ ಮೀಸಲಾಗಿದ್ದವು. ಕಂಪನಿಯ ಮಾಹಿತಿಯ ಪ್ರಕಾರ, ಈ ಬೈಕ್ ಖರೀದಿಸಲು ವಿಶ್ವದಾದ್ಯಂತ 9,000ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದರು.

ಈ ಬೈಕ್ ಏಕೆ ಇಷ್ಟು ವಿಶೇಷ?
ಈ ಬೈಕ್ ಅನ್ನು ತೈವಾನ್‌ನ ಖ್ಯಾತ ಕಸ್ಟಮ್ ಬೈಕ್ ಡಿಸೈನರ್ ವಿನ್‌ಸ್ಟನ್ ಯೆ ಅವರ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ Shotgun 650 ಮಾದರಿಯನ್ನೇ ಆಧಾರವಾಗಿಟ್ಟುಕೊಂಡಿದ್ದರೂ, ಇದರ ಲುಕ್ ಮತ್ತು ಫಿನಿಶಿಂಗ್ ಸಂಪೂರ್ಣ ವಿಭಿನ್ನವಾಗಿದೆ.

ಬೈಕ್‌ನಲ್ಲಿ ಗ್ಲಾಸ್ ಜೆಟ್ ಬ್ಲ್ಯಾಕ್ ಮತ್ತು ಮ್ಯಾಟ್ ಸ್ಟೆಲ್ತ್ ಬ್ಲ್ಯಾಕ್ ಡ್ಯುಯಲ್ ಟೋನ್ ಬಣ್ಣ ಬಳಕೆ ಮಾಡಲಾಗಿದೆ. ಇಂಧನ ಟ್ಯಾಂಕ್ ಮೇಲೆ ಹ್ಯಾಂಡ್‌ಮೇಡ್‌ ಗೋಲ್ಡ್ ಲೀಫ್ ಡಿಸೈನ್, ವಿಶೇಷ ಬ್ರಾಸ್ ಬ್ಯಾಡ್ಜ್ ಹಾಗೂ ಪ್ರತಿಯೊಂದು ಬೈಕ್‌ಗೆ 1ರಿಂದ 100ರವರೆಗೆ ಪ್ರತ್ಯೇಕ ಸಂಖ್ಯೆಯನ್ನು ನೀಡಲಾಗಿದೆ.

ಇದರ ಜೊತೆಗೆ ಕಪ್ಪು ಬಾರ್ ಎಂಡ್ ಮಿರರ್‌, ಪ್ರೀಮಿಯಂ ಲೆದರ್ ಸೀಟ್‌, ಅಲಾಯ್ ವೀಲ್‌ಗಳು ಹಾಗೂ ಗೋಲ್ಡ್ ಬಣ್ಣದ ಫ್ರಂಟ್ ಫೋರ್ಕ್‌ಗಳು ಬೈಕ್‌ಗೆ ಇನ್ನಷ್ಟು ಆಕರ್ಷಕ ಲುಕ್ ನೀಡುತ್ತವೆ.

ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ
ಹೊಸ ವಿನ್ಯಾಸ ಇದ್ದರೂ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಲ್ಲಿ 648cc ಪ್ಯಾರಲಲ್ ಟ್ವಿನ್ ಏರ್/ಆಯಿಲ್ ಕೂಲ್ಡ್ ಎಂಜಿನ್ ಇದ್ದು, 47hp ಪವರ್ ಮತ್ತು 52.3Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ.

ಪ್ರೀಮಿಯಂ ಬೈಕ್‌ಗಳ ಮೇಲಿನ ಕ್ರೇಜ್ ಹೆಚ್ಚಳ
ಭಾರತದಲ್ಲಿ ಈ ಬೈಕ್ ಕೇವಲ 3 ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿರುವುದು, ಪ್ರೀಮಿಯಂ ಹಾಗೂ ಲಿಮಿಟೆಡ್ ಎಡಿಷನ್ ಬೈಕ್‌ಗಳ ಮೇಲಿನ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ವಿಶೇಷ ವಿನ್ಯಾಸ ಮತ್ತು ಅಪರೂಪದ ಮಾದರಿ ಬೇಕೆಂದಿರುವ ಬೈಕ್ ಪ್ರಿಯರು ಈ ಬೈಕ್ ಖರೀದಿಸಲು ಮುಗಿಬಿದ್ದಿದ್ದಾರೆ.


Tags:

Auto NewsPremium BikesRoyal EnfieldShotgun650 Bike
Author

Chaitrabindu BIshetty

Follow Me
Other Articles
Previous

ಪಾಕ್ ಭಯೋತ್ಪಾದಕರ‌ ಹಿಟ್‌ಲಿಸ್ಟ್‌ನಲ್ಲಿ ಬಂಗಾಳದ ಸಿಎಂ..! ಜಂತರ್ ಮಂತರ್‌ನಲ್ಲಿ ದಾಳಿಗೆ ನಡೆದಿತ್ತಾ ಸಂಚು?

Next

ʼಗಟರ್ ಜನರೇಷನ್ʼ ಎಂದು ಬೈದಿದ್ದ Gen-Zಗಳಿಗೆ ಫ್ರೆಂಡ್‌ಶಿಪ್‌ ಡೇ ವಿಶ್ ಮಾಡಿದ ಕಂಗನಾ

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದ ವ್ಯಕ್ತಿ; 9 ವರ್ಷಗಳ ನಂತರ ಸಿಕ್ತು 1.36 ಲಕ್ಷ ರೂ. ಪರಿಹಾರ
  • ‘ಇದು ಐತಿಹಾಸಿಕ ಕ್ರಾಂತಿ’ – ತಂದೆ ವಿಜಯ್ ಗೆಲುವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜೇಸನ್
  • ಸೋನಾಕ್ಷಿ ವಿರುದ್ಧ ಕಂಗನಾ ಪರೋಕ್ಷ ಟೀಕೆ? ಧರ್ಮ, ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ
  • ವಿದ್ಯಾರ್ಥಿಗಳ ವಿರುದ್ಧ FIR ಇಲ್ಲ; ಪ್ರತಿಭಟನೆಗೆ ಬೆಂಬಲಿಸಿದವರಿಗೆ ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರದ ಸ್ಪಷ್ಟನೆ
  • ಡಿಕೆ ಸಂಪುಟ ವಿಸ್ತರಣೆ: 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

Recent Comments

No comments to show.