ಮೈಸೂರು: ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮೈಸೂರು ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ನಟಿ ಕಾಜಲ್ ಅಗರ್ವಾಲ್ ಮೈಸೂರು ಅರಮನೆಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಅರಮನೆಗೆ ಆಗಮಿಸಿದ ಕಾಜಲ್ ಅಗರ್ವಾಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಅವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲಾಯಿತು. ಈ ವೇಳೆ ಅರಮನೆಯ ಇತಿಹಾಸ, ವೈಭವ ಹಾಗೂ ಅದರ ಮಹತ್ವದ ಬಗ್ಗೆ ಅಧಿಕಾರಿಗಳು ನಟಿಗೆ ವಿವರಿಸಿದರು.
ಅರಮನೆಯ ವಾಸ್ತುಶಿಲ್ಪ ಹಾಗೂ ವೈಭವವನ್ನು ಕಾಜಲ್ ಅಗರ್ವಾಲ್ ಆಸಕ್ತಿಯಿಂದ ವೀಕ್ಷಿಸಿದ್ದಾರೆ. ಅರಮನೆಗೆ ಭೇಟಿ ನೀಡಿದ ಬಳಿಕ ಅವರು ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Vastu Tips: ಮನೆಯಲ್ಲಿ ಹಣ, ಆಭರಣ ಈ 4 ಜಾಗಗಳಲ್ಲಿ ಇಡಬೇಡಿ; ಆರ್ಥಿಕ ಸಮಸ್ಯೆ ಬರುತ್ತೆ ಹುಷಾರ್
ಇನ್ನು ಕಾಜಲ್ ಅಗರ್ವಾಲ್ ಅರಮನೆಗೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸಿಗರು ಹಾಗೂ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ನೆಚ್ಚಿನ ನಟಿಯೊಂದಿಗೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಉತ್ಸಾಹ ತೋರಿದರು.
ಇದನ್ನೂ ಓದಿ: ಪಾಕಿಸ್ತಾನದ ಹಾಡು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್; ಸಾಂಗ್ ಹಿಂದಿದ್ಯಾ ಭಾರತೀಯ ನಂಟು
ಕಾಜಲ್ ಅಗರ್ವಾಲ್ ಜೊತೆ ಫೋಟೋ ತೆಗೆಸಿಕೊಂಡ ಅಭಿಮಾನಿಗಳು ಈ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.