ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಬೆಳೆಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಇಲ್ಲೊಂದು ಅವಕಾಶ ಸಿಕ್ಕಿದೆ. IIT Hyderabad ಹೊಸದಾಗಿ ‘4 ವಾರಗಳ ಅನ್ವಯಿಕ AI ವೃತ್ತಿಪರ ಪ್ರಮಾಣೀಕರಣ ಕಾರ್ಯಕ್ರಮ’ವನ್ನು ಪರಿಚಯಿಸಿದೆ.
AI ಬಗ್ಗೆ ಕೇವಲ ಥಿಯರಿ ಕಲಿಸುವ ಬದಲು, ನೈಜ ಜೀವನದಲ್ಲಿ AI ಸಿಸ್ಟಮ್ಗಳನ್ನು ಹೇಗೆ ನಿರ್ಮಿಸಬೇಕು, ನಿರ್ವಹಿಸಬೇಕು ಮತ್ತು ಬಳಸಬೇಕು ಎಂಬುದಕ್ಕೆ ಈ ಕೋರ್ಸ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
4 ವಾರಗಳ ಹೈಬ್ರಿಡ್ ಕೋರ್ಸ್
ಈ ತರಬೇತಿ 2026ರ ಅಕ್ಟೋಬರ್ 24ರಿಂದ ನವೆಂಬರ್ 14ರವರೆಗೆ ನಡೆಯಲಿದೆ. ಕೋರ್ಸ್ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಆನ್ಲೈನ್ ಮತ್ತು ಇತರೆ ತರಬೇತಿ ವ್ಯವಸ್ಥೆಗಳ ಮೂಲಕ ಅಭ್ಯರ್ಥಿಗಳಿಗೆ ಕಲಿಸಲಾಗುತ್ತದೆ.
ಉದ್ಯಮದಲ್ಲಿ ಈಗ ಬೇಕಾಗಿರುವ AI ಕೌಶಲ್ಯಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. AI ಸಿಸ್ಟಮ್ಗಳನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ಕೋರ್ಸ್ನಲ್ಲಿ ಏನೆಲ್ಲಾ ಕಲಿಯಬಹುದು?
ಈ ಕಾರ್ಯಕ್ರಮವನ್ನು ನಾಲ್ಕು ಪ್ರಮುಖ ಮಾಡ್ಯೂಲ್ಗಳಾಗಿ ವಿಂಗಡಿಸಲಾಗಿದೆ. ಮೊದಲ ಮಾಡ್ಯೂಲ್ನಲ್ಲಿ ವಿಶ್ವಾಸಾರ್ಹ AI ಏಜೆಂಟ್ಗಳನ್ನು ನಿರ್ಮಿಸುವ ಮೂಲಭೂತ ಅಂಶಗಳು, ಮಾದರಿ ಆಯ್ಕೆ, ಟೂಲ್ ಕಾಲಿಂಗ್ ಮತ್ತು ರೀಟ್ರೈ ತರ್ಕದ ಬಗ್ಗೆ ಕಲಿಸಲಾಗುತ್ತದೆ.
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಓಡಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್ಗಳು!
ಎರಡನೇ ಮಾಡ್ಯೂಲ್ನಲ್ಲಿ RAG ಕುರಿತು ತರಬೇತಿ ಇರಲಿದೆ. ಡಾಕ್ಯುಮೆಂಟ್ ಚಂಕಿಂಗ್, ಸೆಮ್ಯಾಂಟಿಕ್ ಸರ್ಚ್, ರ್ಯಾಂಕಿಂಗ್ ಹಾಗೂ ಪ್ರಾಂಪ್ಟ್ ಇಂಜೆಕ್ಷನ್ನಿಂದ AI ಸಿಸ್ಟಮ್ಗಳನ್ನು ರಕ್ಷಿಸುವ ವಿಧಾನಗಳನ್ನು ಇಲ್ಲಿ ಕಲಿಯಬಹುದು.
ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿಗಳಿಗೂ ತ್ರಿಭಾಷಾ ನೀತಿಯಿಂದ ವಿನಾಯಿತಿ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಮೂರನೇ ಮಾಡ್ಯೂಲ್ನಲ್ಲಿ ಮಲ್ಟಿ-ಏಜೆಂಟ್ ಸಿಸ್ಟಮ್ಗಳು, ಆರ್ಕೆಸ್ಟ್ರೇಶನ್, ಚೆಕ್ಪಾಯಿಂಟ್ಗಳು ಮತ್ತು MCP ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ನಾಲ್ಕನೇ ಮಾಡ್ಯೂಲ್ನಲ್ಲಿ AI ಸಿಸ್ಟಮ್ಗಳನ್ನು ಟೆಸ್ಟ್ ಮಾಡುವುದು, ಮೌಲ್ಯಮಾಪನ ಮಾಡುವುದು ಮತ್ತು ಪ್ರೊಡಕ್ಷನ್ಗೆ ತರುವ ಪ್ರಕ್ರಿಯೆ ಬಗ್ಗೆ ತಿಳಿಸಲಾಗುತ್ತದೆ.
AI ತಜ್ಞರಿಂದ ತರಬೇತಿ
IIT Hyderabadನ ಅನುಭವಿ ಅಧ್ಯಾಪಕರು ಮತ್ತು AI ಉದ್ಯಮದ ತಜ್ಞರು ಈ ಕಾರ್ಯಕ್ರಮದಲ್ಲಿ ತರಬೇತಿ ನೀಡಲಿದ್ದಾರೆ.
ಕೋರ್ಸ್ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆಯಲು ಅಭ್ಯರ್ಥಿಗಳು ತಾವು ಅಭಿವೃದ್ಧಿಪಡಿಸಿದ AI ಏಜೆಂಟ್ ಅಪ್ಲಿಕೇಶನ್ ಅನ್ನು ಪ್ರದರ್ಶಿಸಬೇಕಾಗುತ್ತದೆ. ಇದರ ಜೊತೆಗೆ ಮೂಲ ಕೋಡ್ ಮತ್ತು ಮೌಲ್ಯಮಾಪನಕ್ಕೆ ಬೇಕಾದ ಸಾಮಗ್ರಿಗಳನ್ನೂ ಸಲ್ಲಿಸಬೇಕು.
ಫೀಸ್ ಎಷ್ಟು?
ಈ ಕಾರ್ಯಕ್ರಮದಲ್ಲಿ ಸೀಮಿತ ಸೀಟುಗಳು ಮಾತ್ರ ಲಭ್ಯವಿವೆ. ಆರಂಭಿಕವಾಗಿ ನೋಂದಣಿ ಮಾಡುವ ಮೊದಲ 20 ಅಭ್ಯರ್ಥಿಗಳಿಗೆ ₹45,000 ಶುಲ್ಕ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ತೆರಿಗೆಗಳು ಸೇರಿವೆ.
ಮೊದಲ 20 ಅರ್ಜಿದಾರರ ನಂತರ ನೋಂದಣಿ ಮಾಡಿಕೊಳ್ಳುವವರಿಗೆ ₹50,000 ಶುಲ್ಕ ಇರಲಿದೆ. ಇದೂ ತೆರಿಗೆ ಸೇರಿದಂತೆ ನಿಗದಿಪಡಿಸಿರುವ ಮೊತ್ತವಾಗಿದೆ.
AI ಕ್ಷೇತ್ರದಲ್ಲಿ ಕೇವಲ ಪುಸ್ತಕದ ಜ್ಞಾನಕ್ಕಿಂತ ಪ್ರಾಯೋಗಿಕ ಕೌಶಲ್ಯ ಪಡೆಯಲು ಬಯಸುವವರಿಗೆ ಈ ಕೋರ್ಸ್ ಗಮನ ಸೆಳೆಯುವಂತಿದೆ.