‘ಟಾಕ್ಸಿಕ್’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಆಸೆ ಈಡೇರಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಿನಿಮಾ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ನಡೆಯುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಕೂಡ ಜೋರಾಗಿದೆ. ಈ ನಡುವೆ ರಾಧಿಕಾ ಪಂಡಿತ್ ಅವರು ಹಲವು ವರ್ಷಗಳ ಹಿಂದೆ ನೀಡಿದ್ದ ಸಂದರ್ಶನವೊಂದು ಮತ್ತೆ ವೈರಲ್ ಆಗಿದೆ.

ಸಂದರ್ಶನದಲ್ಲಿ ರಾಧಿಕಾ ಹೇಳಿದ್ದೇನು?
ಹಳೆಯ ಸಂದರ್ಶನವೊಂದರಲ್ಲಿ ರಾಧಿಕಾ ಪಂಡಿತ್ ಅವರಿಗೆ ಯಶ್ ಅವರನ್ನು ಯಾವ ರೀತಿಯ ಪಾತ್ರದಲ್ಲಿ ನೋಡಲು ಇಷ್ಟ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ರಾಧಿಕಾ, ಯಶ್ ಅವರನ್ನು ಐತಿಹಾಸಿಕ ಪಾತ್ರದಲ್ಲಿ ಅಥವಾ ದ್ವಿಪಾತ್ರದಲ್ಲಿ ನೋಡಬೇಕು ಎಂಬ ಆಸೆ ಇದೆ ಎಂದು ಹೇಳಿದ್ದರು.

ಈಗ ಈ ಆಸೆ ನಿಜವಾಗಿದ್ಯಾ?
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ರಾಯ್ ಮತ್ತು ಟಿಕೆಟ್ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಅಪ್ಪ-ಮಗನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಇದನ್ನೂ ಓದಿ: ನಟ, ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ ₹3.85 ಕೋಟಿ ವಂಚನೆ ಆರೋಪ

ಹೀಗಾಗಿ ಹಲವು ವರ್ಷಗಳ ಹಿಂದೆ ರಾಧಿಕಾ ಪಂಡಿತ್ ವ್ಯಕ್ತಪಡಿಸಿದ್ದ ಆಸೆ ಇದೀಗ ‘ಟಾಕ್ಸಿಕ್’ ಮೂಲಕ ಈಡೇರಿದಂತಾಗಿದೆ. ಇದೇ ವಿಚಾರ ಸದ್ಯ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ರಾಧಿಕಾ-ಮಕ್ಕಳ ಜೊತೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ ಯಶ್; ಫೋಟೋಸ್ ವೈರಲ್

ಮೂರು ಪಾತ್ರಗಳ ಬಗ್ಗೆ ಏನಿದು ಗೊಂದಲ?

‘ಟಾಕ್ಸಿಕ್’ನ ಈ ಹಿಂದೆ ಬಿಡುಗಡೆಯಾದ ಪೋಸ್ಟರ್ ಹಾಗೂ ಟ್ರೇಲರ್‌ನಲ್ಲಿರುವ ಒಂದು ಡೈಲಾಗ್‌ನಿಂದ ಯಶ್ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಸದ್ಯಕ್ಕೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ.

ಚಿತ್ರದಲ್ಲಿ ಯಶ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಖಚಿತವಾಗಿದೆ. ಮೂರನೇ ಪಾತ್ರದ ಬಗ್ಗೆ ಇರುವ ಗೊಂದಲಕ್ಕೆ ಸಿನಿಮಾ ಬಿಡುಗಡೆಯಾದ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *