ಸ್ಯಾಂಡಲ್ವುಡ್ನ ಜನಪ್ರಿಯ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ತುಸು ವಿಭಿನ್ನವಾಗಿ ಆಚರಿಸಿದ್ದಾರೆ. ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಯಶ್ ಹಬ್ಬದ ಸಂಭ್ರಮದಿಂದ ದೂರ ಉಳಿದಿಲ್ಲ.
ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಸದ್ಯ ಬ್ಯುಸಿಯಾಗಿದ್ದಾರೆ. ಹೀಗಾಗಿ ಹಬ್ಬದ ದಿನ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ನೇರವಾಗಿ ಇರಲು ಸಾಧ್ಯವಾಗಿಲ್ಲ.
ಆದರೆ, ಬಿಡುವಿಲ್ಲದ ಕೆಲಸದ ನಡುವೆಯೂ ಲಕ್ಷ್ಮೀ ಪೂಜೆಯ ಸಮಯದಲ್ಲಿ ವಿಡಿಯೋ ಕಾಲ್ ಮೂಲಕ ಪತ್ನಿ ಹಾಗೂ ಮಕ್ಕಳ ಜೊತೆ ಮಾತನಾಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದೂರದಲ್ಲಿದ್ದರೂ ಕುಟುಂಬದ ಜೊತೆ ಹಬ್ಬ ಆಚರಿಸಿದ ಯಶ್ ಅವರ ಈ ಕ್ಷಣ ಅಭಿಮಾನಿಗಳ ಗಮನ ಸೆಳೆದಿದೆ.
ಇತ್ತ ಪತಿ ಯಶ್ ಅನುಪಸ್ಥಿತಿಯಲ್ಲಿ ರಾಧಿಕಾ ಪಂಡಿತ್ ಮಕ್ಕಳ ಜೊತೆ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ಹಬ್ಬದ ಸಂಭ್ರಮದ ಕೆಲವು ಸುಂದರ ಫೋಟೋಗಳು ಹಾಗೂ ಯಶ್ ಜೊತೆಗಿನ ವಿಡಿಯೋ ಕಾಲ್ನ ಕ್ಷಣಗಳನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬದ ಈ ಮುದ್ದಾದ ಕ್ಷಣಗಳ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಶ್-ರಾಧಿಕಾ ಅಭಿಮಾನಿಗಳು ಪ್ರೀತಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.