ಅಂದೇ ಕರೂರಲ್ಲಿ ಅವನನ್ನು ಮುಗಿಸಿದ್ದರೆ ಈ ಸ್ಥಿತಿ ಬರ್ತಿತ್ತಾ?’ ವಿಜಯ್ ಬಗ್ಗೆ ಡಿಎಂಕೆ ಬೆಂಬಲಿಗನ ಹೇಳಿಕೆ ವೈರಲ್!
Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಅವರ ಬಂಧನದ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆಯೊಂದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಅಂದೇ ಕರೂರಿನಲ್ಲಿ ಅವನನ್ನು ಮುಗಿಸಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿತ್ತಾ?” ಎಂಬ ಅರ್ಥದ ಹೇಳಿಕೆ ವಿಡಿಯೊದಲ್ಲಿ ಕೇಳಿಬಂದಿದೆ ಎನ್ನಲಾಗಿದೆ. ಈ ಮಾತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಉದ್ದೇಶಿಸಿ ಹೇಳಲಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ವಿಡಿಯೊದ ಸಂಪೂರ್ಣ ಹಿನ್ನೆಲೆ ಮತ್ತು…