BBK 13: ಸೌಂದ್ರರ್ಯಗೆ ಹೊಡೆದೆ ಬಿಟ್ರಾ ಆಸಿಯಾ ?

Bigg Boss: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಫಿರ್ದೋಸ್ ನಡುವಿನ ಜಗಳ ಮತ್ತಷ್ಟು ತೀವ್ರಗೊಂಡಿದೆ. ನಾಮಿನೇಷನ್ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಟಾಸ್ಕ್ ವೇಳೆ ಆಸಿಯಾ ತಮ್ಮ ಮೇಲೆ ಹೊಡೆದಿದ್ದಾರೆ ಎಂದು ಸೌಂದರ್ಯ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ವಾಪಸ್ ಹೊಡೆಯುವುದಾಗಿ ಹೇಳುತ್ತಾ ಕಂಟೇನರ್ ಹಿಡಿದು ಆಸಿಯಾ ಕಡೆಗೆ ಹೋಗಿದ್ದಾರೆ. ಈ ಘಟನೆಯ ದೃಶ್ಯ ಪ್ರೋಮೋದಲ್ಲಿ ಕಾಣಿಸಿಕೊಂಡಿದೆ.

ಯುವರಾಣಿಯರ ನಡುವೆ ನಾಮಿನೇಷನ್ ಕಿತ್ತಾಟ

ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿಶೇಷ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಆಸಿಯಾ, ಸೌಂದರ್ಯ ಶೆಟ್ಟಿ ಹಾಗೂ ಗಾನವಿ ಯುವರಾಣಿಯರಾಗಿದ್ದಾರೆ. ಆರಂಭದಲ್ಲಿ ಯುವರಾಣಿಯರು ತಮ್ಮ ತಂಡದಲ್ಲಿದ್ದ ಪುರುಷ ಸೇನಾನಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡುತ್ತಿದ್ದರು. ಇದೀಗ ಯುವರಾಣಿಯರ ನಡುವೆಯೇ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ.

ಈ ವೇಳೆ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಅವರನ್ನು ಡೇಂಜರ್ ಝೋನ್‌ಗೆ ತಳ್ಳಿದ್ದಾರೆ. ಇದರಿಂದ ಇಬ್ಬರ ನಡುವಿನ ವಾಗ್ವಾದ ಮತ್ತಷ್ಟು ಹೆಚ್ಚಾಗಿದೆ.

ಆಸಿಯಾ ಕೊಟ್ಟ ನಾಮಿನೇಷನ್ ಕಾರಣವೇನು?

ನಾಮಿನೇಷನ್ ವೇಳೆ ಆಸಿಯಾ ತಮ್ಮ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ. “ಇಬ್ಬರು ಮಾತನಾಡುವಾಗ ಮಧ್ಯದಲ್ಲಿ ಬಂದು ನನ್ನನ್ನು ಇನ್‌ಸೆಕ್ಯೂರ್, ಜೀರೋ ಅಂತೆಲ್ಲಾ ಕರೆಯುತ್ತಾರೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸೌಂದರ್ಯ, ಆಸಿಯಾ ಮಾತನಾಡುವ ಧಾಟಿಯನ್ನು ಅನುಕರಿಸುತ್ತಾ “ಕ್ವಾಕ್, ಕ್ವಾಕ್” ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, “ಗಾನವಿ ನಾರ್ಮಲ್ ಸ್ನೇಕ್ ಆದರೆ, ನೀನು ದೊಡ್ಡ ಸ್ನೇಕ್” ಎಂದು ಆಸಿಯಾಗೆ ಹೇಳಿದ್ದಾರೆ.

ಇದನ್ನೂ ಓದಿ: ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ಸಾಗಿದ ವಾಯೇಜರ್-1; 49 ವರ್ಷಗಳ ಪಯಣದಲ್ಲಿ ಐತಿಹಾಸಿಕ ಸಾಧನೆ!

ಆಸಿಯಾ ತಿರುಗೇಟು; ಮತ್ತೆ ಶುರುವಾಯ್ತು ಜಗಳ

ಸೌಂದರ್ಯ ಮಾತಿಗೆ ತಿರುಗೇಟು ನೀಡಿದ ಆಸಿಯಾ, “ಆಟವಾಡಿ ಗೆದ್ದಿದ್ದಕ್ಕೆ ನಿನಗೆ ನಾನು ಸ್ನೇಕ್ ಆಗಿಬಿಟ್ಟೆನಾ? ನಿನ್ನನ್ನು ನಾಮಿನೇಟ್ ಮಾಡಿದ್ದಕ್ಕೆ ಸ್ನೇಕ್ ಆಗಿಬಿಟ್ಟೆನಾ?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸೌಂದರ್ಯ, “ಎಷ್ಟು ಕೂಗುತ್ತೀಯಾ ನೀನು? ಮೊಸಳೆ ಕಣ್ಣೀರು ಬರೋದು ಬಾಕಿ” ಎಂದು ವ್ಯಂಗ್ಯವಾಡಿದ್ದಾರೆ.

ಸೌಂದರ್ಯಗೆ ಆಸಿಯಾ ಹೊಡೆದರಾ?

ಟಾಸ್ಕ್‌ನಲ್ಲಿ ಸಗಣಿ ನೀರು ಸುರಿಯುವ ಸಂದರ್ಭದಲ್ಲಿ ಆಸಿಯಾ ಕಂಟೇನರ್ ಖಾಲಿ ಮಾಡುವಾಗ ನೀರನ್ನು ಎರಚಿದ್ದಾರೆ. ಇದನ್ನು ಆಸಿಯಾ ಹೊಡೆದಿದ್ದಾರೆ ಎಂದು ಭಾವಿಸಿದ ಸೌಂದರ್ಯ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ವಾಪಸ್ ಹೊಡೆಯುತ್ತೇನೆ. ನೀನು ಹೊಡೆದೆ” ಎಂದು ಹೇಳುತ್ತಾ ಕಂಟೇನರ್ ಹಿಡಿದು ಆಸಿಯಾ ಕಡೆಗೆ ಹೋಗಿದ್ದಾರೆ. ಇದಕ್ಕೆ ಆಸಿಯಾ, “ನಾನು ಹೊಡೆದಿಲ್ಲ, ಹಾಕಿದ್ದು ಅಷ್ಟೇ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಸೌಂದರ್ಯ, “ನೀನು ಹೊಡೆದೆ. ಬಡಿಯುತ್ತೇನೆ ನಿನಗೆ” ಎಂದು ಕೂಗಾಡಿರುವುದು ಪ್ರೋಮೋದಲ್ಲಿ ಕಂಡುಬಂದಿದೆ.

ಇದನ್ನೂ ಓದಿ:ಐಶ್ವರ್ಯಾ ರೈ ಕೇನ್ಸ್ ಗೌನ್‌ಗೆ PETA ಪ್ರಶಸ್ತಿ; ಕತ್ರಿನಾ ಕೈಫ್‌ರ ಕೇ ಬ್ಯೂಟಿಗೂ ಗೌರವ!

ಸೌಂದರ್ಯ ಶೆಟ್ಟಿ ತಂಡ ನಾಮಿನೇಷನ್ ಬಿಸಿಯಲ್ಲಿ

ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೌಂದರ್ಯ ಶೆಟ್ಟಿ ತಂಡ ಸಂಕಷ್ಟಕ್ಕೆ ಸಿಲುಕಿದೆ. ಸೌಂದರ್ಯ ಶೆಟ್ಟಿ, ಜಗದೀಶ್, ತಾಂಡವ್ ರಾವ್ ಹಾಗೂ ಯಶಸ್ ಕೃಷ್ಣ ಪ್ರಸ್ತುತ ಡೇಂಜರ್ ಝೋನ್‌ನಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಈ ನಾಮಿನೇಷನ್ ಪ್ರಕ್ರಿಯೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

Leave a Reply

Your email address will not be published. Required fields are marked *