IOCL Recruitment 2026: 335 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ನವೆಂಬರ್ 4 ಕೊನೆಯ ದಿನ

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)ನಿಂದ ಉತ್ತಮ ಅವಕಾಶವೊಂದು ಬಂದಿದೆ. IOCLನ ಪಶ್ಚಿಮ ವಲಯದ ಮಾರ್ಕೆಟಿಂಗ್ ವಿಭಾಗದಲ್ಲಿ ಒಟ್ಟು 335 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಜುಯೇಟ್, ಟೆಕ್ನಿಷಿಯನ್, ಟ್ರೇಡ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ನಿಯಮಾನುಸಾರ ಸ್ಟೈಪೆಂಡ್ ಕೂಡ ಸಿಗಲಿದೆ.

335 ಹುದ್ದೆಗಳು ಯಾವೆಲ್ಲಾ?

IOCLನ ಪಶ್ಚಿಮ ವಲಯದ ವ್ಯಾಪ್ತಿಗೆ ಬರುವ ಮಹಾರಾಷ್ಟ್ರ, ಗುಜರಾತ್, ಗೋವಾ, ಮಧ್ಯಪ್ರದೇಶ, ಛತ್ತೀಸ್‌ಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಪ್ರದೇಶಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಒಟ್ಟು 335 ಹುದ್ದೆಗಳಲ್ಲಿ:

  • 174 ಗ್ರಾಜುಯೇಟ್ ಅಪ್ರೆಂಟಿಸ್
  • 99 ಟೆಕ್ನಿಷಿಯನ್ ಅಪ್ರೆಂಟಿಸ್
  • 40 ಟ್ರೇಡ್ ಅಪ್ರೆಂಟಿಸ್
  • 22 ಡೇಟಾ ಎಂಟ್ರಿ ಆಪರೇಟರ್

ಹುದ್ದೆಗಳು ಸೇರಿವೆ.

ಇದನ್ನೂ ಓದಿ: DRDOದಲ್ಲಿ ITI ಪಾಸಾದವರಿಗೆ ಅಪ್ರೆಂಟಿಸ್ ಅವಕಾಶ; ತಿಂಗಳಿಗೆ ₹10,560 ಸ್ಟೈಫಂಡ್!

ಶೈಕ್ಷಣಿಕ ಅರ್ಹತೆ ಏನು?

ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಬದಲಾಗುತ್ತದೆ.

ಟೆಕ್ನಿಷಿಯನ್ ಅಪ್ರೆಂಟಿಸ್: ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಟ್ರೇಡ್ ಅಪ್ರೆಂಟಿಸ್: 10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ಟ್ರೇಡ್‌ನಲ್ಲಿ 2 ವರ್ಷಗಳ ITI ಪೂರ್ಣಗೊಳಿಸಿರಬೇಕು.

ಗ್ರಾಜುಯೇಟ್ ಅಪ್ರೆಂಟಿಸ್: BA, B.Com, B.Sc ಅಥವಾ BBA ಸೇರಿದಂತೆ ಸಂಬಂಧಿತ ಪದವಿ ಹೊಂದಿರಬೇಕು.

ಡೇಟಾ ಎಂಟ್ರಿ ಆಪರೇಟರ್: 12ನೇ ತರಗತಿ ಅಥವಾ PUC ಉತ್ತೀರ್ಣರಾಗಿರಬೇಕು.

ವಯೋಮಿತಿ ಎಷ್ಟು?

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ 24 ವರ್ಷ ಆಗಿದೆ. ವಯೋಮಿತಿಯನ್ನು ಸೆಪ್ಟೆಂಬರ್ 30, 2026ರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಅರ್ಹತೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕಗಳ ಅವಶ್ಯಕತೆ ಇದ್ದರೆ, SC, ST ಮತ್ತು PwBD ಅಭ್ಯರ್ಥಿಗಳಿಗೆ ಶೇ.45 ಅಂಕಗಳ ಮಾನದಂಡ ಅನ್ವಯಿಸುತ್ತದೆ.

ಮೆರಿಟ್ ಆಧಾರದ ಮೇಲೆ ಆಯ್ಕೆ

ಈ ಅಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ಪ್ರತ್ಯೇಕ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಲಕ್ಷಕ್ಕೂ ಅಧಿಕ ವೇತನದ ಸರ್ಕಾರಿ ಉದ್ಯೋಗ: IGNOUನಲ್ಲಿ 43 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು NAPS ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಮೊದಲು NAPS ಪೋರ್ಟಲ್‌ನಲ್ಲಿ ತಮ್ಮ ಪ್ರೊಫೈಲ್ ರಚಿಸಬೇಕು. ಬಳಿಕ “IOCL Marketing Division, Western Region” ಅಪ್ರೆಂಟಿಸ್ ಹುದ್ದೆಯನ್ನು ಹುಡುಕಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 4, 2026
ಕೊನೆಯ ಸಮಯ: ಸಂಜೆ 5 ಗಂಟೆ

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಮ್ಮ ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರ ಅರ್ಹತಾ ನಿಯಮಗಳನ್ನು ಪರಿಶೀಲಿಸುವುದು ಉತ್ತಮ.

One thought on “IOCL Recruitment 2026: 335 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ನವೆಂಬರ್ 4 ಕೊನೆಯ ದಿನ”

Leave a Reply

Your email address will not be published. Required fields are marked *