Bigg Boss Kannada 13: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 13 ಅದ್ಧೂರಿಯಾಗಿ ಆರಂಭವಾಗಿದೆ. ಗ್ರ್ಯಾಂಡ್ ಓಪನಿಂಗ್ನಲ್ಲಿ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಿನಿಮಾ, ಕಿರುತೆರೆ, ಮಾಡೆಲಿಂಗ್ ಹಾಗೂ ಸೋಶಿಯಲ್ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪರಿಚಿತ ಮುಖಗಳು ಈ ಬಾರಿ ಬಿಗ್ಬಾಸ್ ಮನೆಯಲ್ಲಿದ್ದಾರೆ. ಕೆಲವರು ನೇರವಾಗಿ ಎಂಟ್ರಿ ಪಡೆದರೆ, ಇನ್ನು ಕೆಲವರು ಅಗ್ನಿಪರೀಕ್ಷೆ ಮೂಲಕ ಆಯ್ಕೆಯಾಗಿ ಮನೆ ಸೇರಿದ್ದಾರೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು
1. ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್
ತಮ್ಮದೇ ಆದ ಮಾತಿನ ಶೈಲಿಯಿಂದ ಗಮನ ಸೆಳೆದಿರುವ ಜಗದೀಶ್ ಈ ಬಾರಿ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿದ್ದಾರೆ. ತಮ್ಮ ಮಾತಿನ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ.
2. ಸೌಂದರ್ಯ ಶೆಟ್ಟಿ
ಮಂಗಳೂರಿನ ಮೂಲದ ಸೌಂದರ್ಯ ಶೆಟ್ಟಿ ಮಾಡೆಲಿಂಗ್ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆಯ ಆಟಕ್ಕೆ ಕಾಲಿಟ್ಟಿದ್ದಾರೆ.
3. ಅವಿನಾಶ್ ಶತಮರ್ಷನ
ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅವಿನಾಶ್ ಶತಮರ್ಷನ ನಟ, ನಿರ್ದೇಶಕ ಮತ್ತು ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿದ್ದಾರೆ.
4. ಪ್ರಥಮಾ ಪ್ರಸಾದ್
ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಕಿರುತೆರೆಯಲ್ಲಿ ಪರಿಚಿತ ಮುಖ. ಇದೀಗ ಬಿಗ್ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.
5. ಗಗನ್ ಚಿನ್ನಪ್ಪ
‘ಮಂಗಳಗೌರಿ ಮದುವೆ’, ‘ಸೀತಾರಾಮ ಕಲ್ಯಾಣ’ ಸೇರಿದಂತೆ ಧಾರಾವಾಹಿಗಳ ಮೂಲಕ ಗಮನ ಸೆಳೆದಿರುವ ಗಗನ್ ಚಿನ್ನಪ್ಪ, ಬಿಗ್ಬಾಸ್ ಮನೆಯಲ್ಲಿ ಸಖತ್ ಮನರಂಜನೆ ನೀಡುವುದಾಗಿ ಹೇಳಿದ್ದಾರೆ.
6. ಸಂಗೀತಾ ಭಟ್
ಕನ್ನಡ ನಟಿ ಸಂಗೀತಾ ಭಟ್ ಕೂಡ ಈ ಬಾರಿ ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಭಿನ್ನ ಲುಕ್ಗಳಿಂದ ಗಮನ ಸೆಳೆದಿರುವ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.
7. ಕಾವ್ಯ ಗೌಡ
‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಶ್ರೇಷ್ಠಾ ಪಾತ್ರದ ಮೂಲಕ ಜನಪ್ರಿಯರಾದ ಕಾವ್ಯ ಗೌಡ ಕೂಡ ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
8. ಓಂ ಪ್ರಕಾಶ್
ಕನ್ನಡ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ಕೂಡ ಈ ಬಾರಿ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿದ್ದಾರೆ.
9. ಕಿರಣ್ ಶಾಸ್ತ್ರಿ
ಉತ್ತರ ಕರ್ನಾಟಕದ ಜವಾರಿ ಮಾತು, ನೇರ ಮಾತು ಹಾಗೂ ವಿಭಿನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿರುವ ಕಿರಣ್ ಶಾಸ್ತ್ರಿ, ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಿಗ್ಬಾಸ್ ಮನೆ ಸೇರಿದ್ದಾರೆ.
10. ಆಸಿಯಾ ಫಿರ್ದೋಸ್
‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೂಲಕ ಪರಿಚಿತರಾದ ಆಸಿಯಾ ಫಿರ್ದೋಸ್ ಕೂಡ ಬಿಗ್ಬಾಸ್ ಮನೆಯ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ.
11. ಲಿಖಿತ್ ಗೋಂದಿ
ಅಗ್ನಿಪರೀಕ್ಷೆ ಮೂಲಕ ಆಯ್ಕೆಯಾದ ಮತ್ತೊಬ್ಬ ಸ್ಪರ್ಧಿ ಲಿಖಿತ್ ಗೋಂದಿ. ಇದೀಗ ಬಿಗ್ಬಾಸ್ ಮನೆಯಲ್ಲಿ ತಮ್ಮ ಆಟ ತೋರಿಸಲು ಸಜ್ಜಾಗಿದ್ದಾರೆ.
12. ತಾಂಡವ್ ರಾಮ್
ಕುಸ್ತಿ ಪಟುವಾಗಿರುವ ತಾಂಡವ್ ರಾಮ್ ‘ಜೋಡಿ ಹಕ್ಕಿ’ ಧಾರಾವಾಹಿ ಮೂಲಕ ಸೀರಿಯಲ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆ ಸೇರಿದ್ದಾರೆ.
13. ವೈಷ್ಣವಿ ವಿ. ಕೌಂಡಿನ್ಯ
‘ಮಿಥುನ ರಾಶಿ’, ‘ಪ್ರೇಮ ಕಾವ್ಯ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ ವಿ. ಕೌಂಡಿನ್ಯ ಕಿರುತೆರೆಯ ಪರಿಚಿತ ಮುಖ. ಈ ಬಾರಿ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿದ್ದಾರೆ.
14. ಧನುಷ್ ಮಂಜುನಾಥ್
ಅಗ್ನಿಪರೀಕ್ಷೆ ಮೂಲಕ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂರನೇ ಸ್ಪರ್ಧಿಯಾಗಿ ಧನುಷ್ ಮಂಜುನಾಥ್ ಆಯ್ಕೆಯಾಗಿದ್ದಾರೆ.
15. ಯಶಸ್ ಕೃಷ್ಣ
‘ಪವಿತ್ರ ಬಂಧನ’ ಧಾರಾವಾಹಿಯ ತಿಲಕ್ ದೇಶ್ಮುಖ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿರುವ ಯಶಸ್ ಕೃಷ್ಣ, 15ನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
16. ಮಂಜುನಾಥ್
ಅಗ್ನಿಪರೀಕ್ಷೆಯ ಜ್ಯೂರಿ ಆಯ್ಕೆ ಮಾಡಿದ ಸ್ಪರ್ಧಿಯಾಗಿ ಮಾಡರ್ನ್ ಕವಿ ಮಂಜುನಾಥ್ ಬಿಗ್ಬಾಸ್ ಮನೆಗೆ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಇದೀಗ ಈ 16 ಸ್ಪರ್ಧಿಗಳ ಆಟ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಶುರುವಾಗಿದೆ. ಯಾರು ತಮ್ಮ ಮಾತಿನಿಂದ ಗಮನ ಸೆಳೆಯುತ್ತಾರೆ? ಯಾರು ಟಾಸ್ಕ್ಗಳಲ್ಲಿ ಮಿಂಚುತ್ತಾರೆ? ಯಾರು ಮನೆಯೊಳಗೆ ಕಿರಿಕ್ ಮಾಡಿಕೊಂಡು ಸುದ್ದಿಯಾಗುತ್ತಾರೆ? ಅನ್ನೋದನ್ನು ಕಾದು ನೋಡಬೇಕಿದೆ.
ಅಂತೂ ಬಿಗ್ಬಾಸ್ ಕನ್ನಡ ಸೀಸನ್ 13ರ ಆಟ ಶುರುವಾಗಿದೆ. ಮುಂದಿನ ದಿನಗಳಲ್ಲಿ ಮನೆಯೊಳಗಿನ ಸ್ನೇಹ, ಜಗಳ, ಟಾಸ್ಕ್ ಹಾಗೂ ಎಲಿಮಿನೇಷನ್ಗಳು ಶೋಗೆ ಮತ್ತಷ್ಟು ಕುತೂಹಲ ಹೆಚ್ಚಿಸುವ ನಿರೀಕ್ಷೆಯಿದೆ.