RCB: ಬದಲಾಗುತ್ತಾ ಆರ್‌ಸಿಬಿ ಹೆಸರು? – ಮಾಲೀಕ ಆರ್ಯಮನ್ ಬಿರ್ಲಾ ಹೇಳಿದ್ದೇನು?

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರು ಬದಲಾಗಲಿದೆ ಎಂಬ ವದಂತಿಗಳಿಗೆ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ ತೆರೆ ಎಳೆದಿದ್ದಾರೆ.

ಇತ್ತೀಚಿನ ಮಾಲೀಕತ್ವ ಬದಲಾವಣೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ RCB ಹೆಸರು ಮತ್ತು ಬ್ರ್ಯಾಂಡ್ ಬದಲಾಗಬಹುದು ಎಂಬ ಚರ್ಚೆಗಳು ಜೋರಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಯಮನ್ ಬಿರ್ಲಾ, ತಂಡದ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ದೊಡ್ಡ ಬ್ರ್ಯಾಂಡ್ ಆಗಿದ್ದು, ಈ ಹೆಸರು ನಮಗೆ ತುಂಬಾ ಇಷ್ಟ ಎಂದು ಅವರು ಹೇಳಿದ್ದಾರೆ. ಹೀಗಾಗಿ ಹೆಸರು ಬದಲಾವಣೆಯ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಸದ್ಯಕ್ಕೆ ತೆರೆ ಬಿದ್ದಿದೆ.

ಮಾಲೀಕತ್ವ ಬದಲಾವಣೆ ಬಳಿಕ ಶುರುವಾಗಿತ್ತು ಗೊಂದಲ

IPL ಫ್ರಾಂಚೈಸಿಯ ಕಾರ್ಪೊರೇಟ್ ಪುನರ್‌ರಚನೆ ಮತ್ತು ಹೊಸ ನಾಯಕತ್ವದ ಹಿನ್ನೆಲೆಯಲ್ಲಿ ತಂಡದ ಹೆಸರು ಹಾಗೂ ಲೋಗೋ ಬದಲಾಗಬಹುದು ಎಂಬ ಚರ್ಚೆ ಅಭಿಮಾನಿಗಳಲ್ಲಿ ಮೂಡಿತ್ತು.

ಸುಮಾರು ಎರಡು ದಶಕಗಳಿಂದ ಅಭಿಮಾನಿಗಳ ಭಾವನೆಗಳೊಂದಿಗೆ ಬೆಸೆದುಕೊಂಡಿರುವ RCB ಹೆಸರು ಮತ್ತು ಲೋಗೋವನ್ನು ಹೊಸ ಆಡಳಿತ ಬದಲಾಯಿಸಬಹುದು ಎಂಬ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಅಧ್ಯಕ್ಷರ ಹೇಳಿಕೆ ಈ ಚರ್ಚೆಗೆ ಬ್ರೇಕ್ ಹಾಕಿದೆ.

ಶತಕೋಟಿ ಡಾಲರ್ ಬ್ರ್ಯಾಂಡ್ ಮೇಲೆ ಕಣ್ಣು!

ಇಂದು RCB ಕೇವಲ IPL ತಂಡವಾಗಿ ಮಾತ್ರವಲ್ಲದೆ ದೊಡ್ಡ ಕ್ರೀಡಾ ಬ್ರ್ಯಾಂಡ್ ಆಗಿಯೂ ಗುರುತಿಸಿಕೊಂಡಿದೆ. ತಂಡದ ಬ್ರ್ಯಾಂಡ್ ಮೌಲ್ಯ ಈಗಾಗಲೇ ದೊಡ್ಡ ಮಟ್ಟಕ್ಕೆ ಬೆಳೆದಿರುವ ಹಿನ್ನೆಲೆಯಲ್ಲಿ ಹೆಸರನ್ನು ಬದಲಾಯಿಸುವುದು ಅಭಿಮಾನಿಗಳು ಮತ್ತು ಬ್ರ್ಯಾಂಡ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *