Renukaswamy Murder Case: ‘ಮಾಫಿ ಸಾಕ್ಷಿ ಸುಲಭವಲ್ಲ, ಸ್ವಲ್ಪ ಉಲ್ಟಾ ಹೊಡೆದ್ರೆ’! ದರ್ಶನ್‌ಗೆ ಕಾದಿದ್ಯಾ ಸಂಕಷ್ಟ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Murder Case) ಜೈಲು ಪಾಲಾಗಿರುವ ದರ್ಶನ್​​ಗೆ (Darshan) ಮಾಫಿ ಸಾಕ್ಷಿ ಕಂಟಕ ಶುರುವಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್​, ಪವಿತ್ರಾ ಹಾಗೂ ದರ್ಶನ್ ವಿರುದ್ಧ ಸಾಕ್ಷ್ಯ ಹೇಳಲು ಸಜ್ಜಾಗಿ ನಿಂತಿದ್ದಾನೆ. ಇದಕ್ಕಾಗಿ ಕೋರ್ಟ್‌ ಕೂಡ ಓಕೆ ಅಂತ ಹೇಳಿದ್ದು, ನಾಳೆ ಕೋರ್ಟ್‌ನಲ್ಲಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ. ಪ್ರದೋಷ್​ ಹೇಳಿಕೆ ಇಬ್ಬರಿಗೂ ಮತ್ತಷ್ಟು ಕಂಟಕವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಹೀಗಿರುವಾಗಲೇ ಹಿರಿಯ ವಕೀಲ ಶಂಕರಪ್ಪ ಅವರು ಮಾಫಿ ಸಾಕ್ಷಿ ಕುರಿತು ಮಾತನಾಡಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಲ್ಪ ಉಲ್ಟಾ ಹೊಡೆದರೆ ಆತನಿಗೆ ಡಬಲ್ ಸಮಸ್ಯೆ!
ಇತ್ತೀಚೆಗೆ ಈ ಮಾಫಿ ಸಾಕ್ಷಿ ಅನ್ನೋದು ಹೆಚ್ಚಾಗಿದೆ ಅಂತಾ ಹಿರಿಯ ವಕೀಲ ಶಂಕರಪ್ಪ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಸ್ವಲ್ಪ ಉಲ್ಟಾ ಹೊಡೆದರೆ ಆತನಿಗೆ ಡಬಲ್ ಸಮಸ್ಯೆ ಎದುರಾಗಲಿದೆ. ವಿನಯ್ ಕುಲಕರ್ಣಿ, ದರ್ಶನ್ ಪ್ರಕರಣದಲ್ಲಿ ಮಾಫಿ ಸಾಕ್ಷಿ ಅರ್ಜಿ ಹಾಕಲಾಗಿದೆ. ಚಾರ್ಜ್ ಶೀಟ್ ಹಾಕಿದ ಬಳಿಕ ಕೋರ್ಟ್​ಗೆ ಅರ್ಜಿ ಹಾಕಿದಾಗ ಅಪ್ರೂವರ್ ಅರ್ಜಿ ವಿಚಾರಣೆ ನಡೆಯಲಿದೆ. ಅಲ್ಲಿ ಒತ್ತಡ, ‌ಮತ್ತೊಬ್ಬರ‌ನ್ನು ಸಿಕ್ಕಿಸೋ ರೀತಿ ಹೇಳಿಕೆ ಕೊಟ್ಟಲ್ಲಿ ಸಮಸ್ಯೆ ಆಗಲಿದೆ ಎಂದು ಹೇಳಿದರು.

ಇದೊಂದು ಸುಲಭವಾದ ಟ್ರೆಂಡ್ ಆಗಿದೆ, ಆದ್ರೆ, ಕಷ್ಟವಿದೆ
ಮುಂದುವರೆದು ಮಾತನಾಡಿರುವ ಅವರು, ಮಾಫಿ ಸಾಕ್ಷಿ ಅನ್ನೋದು ಸುಲಭವಲ್ಲ. ಮೊದಲು ಸ್ಟೇಷನ್‌ನಲ್ಲಿ ಹೇಳಿಕೆ ಕೊಟ್ಟಿರುತ್ತಾರೆ. ಆ ಬಳಿಕ ಕಸ್ಟಡಿಗೆ ಪಡೆಯಲು ಪೊಲೀಸರು ಆಕೆ ಮೇಲಿನ ಆರೋಪದ ಬಗ್ಗೆ ಉಲ್ಲೇಖ ಮಾಡಿರುತ್ತಾರೆ. 164 ಸ್ಟೇಟ್​ಮೆಂಟ್​ ಆಗಿರುತ್ತೆ. ಟ್ರಯಲ್ ಮುಗಿಯೋವರೆಗೂ ರಿಲೀಸ್ ಆಗಲ್ಲ. ಯಾರದೋ ಒತ್ತಡ, ಆಮಿಷ, ಪ್ರಚೋದನೆ ಒಳಗಾಗಿ ಈ ರೀತಿ ಅರ್ಜಿ ಹಾಕಿರಬಹುದು. ನ್ಯಾಯಾಧೀಶರ ವಿವೇಚನೆಗೆ ಬಿಟ್ಟದ್ದು, ಒಪ್ಪುವ ಸಾಧ್ಯತೆ ಕಡಿಮೆ ಇದೆ. ಬ್ರಿಟಿಷರ ಕಾಲದಿಂದಲೂ ಈ ಅಪ್ರೂವರ್ ಪದ್ಧತಿ ಇದೆ. ಆದರೆ ನಿಜವಾದ ಅಪರಾಧದಲ್ಲಿ ಭಾಗಿಯಾಗದವರ ರಕ್ಷಣೆಗೆ, ಆರೋಪಿಗಳ ಶಿಕ್ಷೆಗೆ ಈ ಪದ್ಧತಿ ಇದೆ. ಆದರೀಗ ಇದೊಂದು ಸುಲಭವಾದ ಟ್ರೆಂಡ್ ಆಗಿದೆ. ಆದರೆ ಕಷ್ಟವಿದೆ ಎಂದು ಹಿರಿಯ ವಕೀಲ ಶಂಕರಪ್ಪ ಅವರು ಮಾಹಿತಿ ನೀಡಿದರು.

ಕಂಬಿ ಹಿಂದಿರುವ ಪವಿತ್ರಾ ಗೌಡಗೆ ಅನಾರೋಗ್ಯ
ನಿತ್ಯ ಪ್ರಕರಣದ ವಿಚಾರಣೆಯಿಂದ ಹೈರಾಣಾಗಿರುವ ಪವಿತ್ರಾ ಗೌಡ, ಈಗ ಕಂಬಿ ಹಿಂದ ಕಣ್ಣೀರಾಕುತ್ತಲೇ ಅನಾರೋಗ್ಯಕ್ಕೀಡಾಗಿದ್ದಾರಂತೆ. ಹೀಗಾಗಿಯೇ ನಿನ್ನೆ ವಿಚಾರಣೆಗೆ ಪವಿತ್ರಾ ಗೌಡ ಗೈರಾಗಿದ್ದರು. ಈ ಮಧ್ಯೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಖುದ್ದು ಭೇಟಿ ನೀಡಿ ಪವಿತ್ರಾ ಗೌಡಗೆ ಧೈರ್ಯ ಹೇಳಿದ್ದಾರೆ. ಪವಿತ್ರಾ ಗೌಡ ತುಂಬಾ ಡಿಸ್ಟರ್ಬ್ ಆಗಿದ್ದಾಳೆ. ಆಕೆ ನನ್ನ ಮಗಳಿದ್ದಂತೆ, ನೋಂದ ಮನಸುಗಳನ್ನು ನೋಯಿಸಬೇಡಿ ಅಂತ ಮನವಿ ಜೊತೆ ಮರುಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *