ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಬಾಕ್ಸ್ ಆಫೀಸ್‌ನಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿದೆ. ಬಿಡುಗಡೆಯಾಗಿ 17 ದಿನಗಳನ್ನು ಪೂರೈಸಿರುವ ಚಿತ್ರ, ಭಾರತದಲ್ಲಿ 900 ಕೋಟಿ ರೂಪಾಯಿಗಳ ನಿವ್ವಳ ಗಳಿಕೆಯ ಗಡಿ ದಾಟಿದೆ. ಇದರೊಂದಿಗೆ ವಿಶ್ವಾದ್ಯಂತ ಚಿತ್ರದ ಒಟ್ಟು ಗಳಿಕೆ 1,616.70 ಕೋಟಿ ರೂಪಾಯಿಗಳಿಗೆ ತಲುಪಿದೆ.
ಮೂರನೇ ಶನಿವಾರವಾದ ನವೆಂಬರ್ 21ರಂದು ದೇಶಾದ್ಯಂತ 15,851 ಪ್ರದರ್ಶನಗಳ ಮೂಲಕ ಚಿತ್ರ 27.40 ಕೋಟಿ ರೂಪಾಯಿ ನಿವ್ವಳ ಗಳಿಕೆ ಕಂಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ 906.90 ಕೋಟಿ ರೂಪಾಯಿಗಳಾಗಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ 1,083.70 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಸಮಂತಾ-ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನನ; ಮುದ್ದಾದ ಫೋಟೋ ಹಂಚಿಕೊಂಡ ನಟಿ!
ಭಾಷಾವಾರು 17ನೇ ದಿನದ ಗಳಿಕೆ ಎಷ್ಟು?
ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿ ಅಗ್ರಸ್ಥಾನದಲ್ಲಿದೆ. ಉಳಿದ ಭಾಷೆಗಳಲ್ಲಿಯೂ ಚಿತ್ರ ಉತ್ತಮ ಪ್ರದರ್ಶನ ನೀಡಿದೆ.
- ಹಿಂದಿ: 20.25 ಕೋಟಿ ರೂ. (13,553 ಪ್ರದರ್ಶನಗಳು)
- ಮಲಯಾಳಂ: 2.75 ಕೋಟಿ ರೂ. (838 ಪ್ರದರ್ಶನಗಳು)
- ತಮಿಳು: 2 ಕೋಟಿ ರೂ. (601 ಪ್ರದರ್ಶನಗಳು)
- ಕನ್ನಡ: 1.65 ಕೋಟಿ ರೂ. (411 ಪ್ರದರ್ಶನಗಳು)
- ತೆಲುಗು: 75 ಲಕ್ಷ ರೂ. (448 ಪ್ರದರ್ಶನಗಳು)
ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಗಳಿಕೆ
ಭಾರತದಾಚೆಯೂ ‘ರಾಮಾಯಣ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 17ನೇ ದಿನದಂದು ವಿದೇಶಿ ಮಾರುಕಟ್ಟೆಯಲ್ಲಿ 10 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಸಾಗರೋತ್ತರ ಮಾರುಕಟ್ಟೆಯ ಒಟ್ಟು ಗಳಿಕೆ 533 ಕೋಟಿ ರೂಪಾಯಿಗಳಿಗೆ ತಲುಪಿದೆ.
ಭಾರತ ಮತ್ತು ವಿದೇಶಗಳ ಗಳಿಕೆಯನ್ನು ಸೇರಿಸಿದರೆ, ಚಿತ್ರದ ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ 1,616.70 ಕೋಟಿ ರೂಪಾಯಿಗಳಾಗಿದೆ.
ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿ-ಧನ್ವೀರ್ ಜಟಾಪಟಿ ಕೇಸ್‌ಗೆ ಟ್ವಿಸ್ಟ್; 3 ಪ್ರಕರಣಗಳ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!


