ವರ್ಕ್ ಫ್ರಮ್ ಹೋಮ್ ಮಾಡುವ ವೇಳೆ ಕೆಲಸದ ಜೊತೆಗೆ ವೈಯಕ್ತಿಕ ಸಮಯವನ್ನೂ ಬಳಸಿಕೊಳ್ಳಲು ಯತ್ನಿಸಿದ ಜೆನ್ Z ಉದ್ಯೋಗಿಯೊಬ್ಬಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಂಡೇ ಆನ್‌ಲೈನ್ ಮೀಟಿಂಗ್‌ಗೆ ಹಾಜರಾದ ಆಕೆ, ಮ್ಯಾನೇಜರ್‌ಗೆ ನೀಡಿದ ಉತ್ತರ ನೆಟ್ಟಿಗರ ಗಮನ ಸೆಳೆದಿದೆ.
ಟೀಮ್ ಬ್ರಿಡ್ಜರ್ಸ್ (Team Bridgers) ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮ್ಯಾನೇಜರ್ ಆನ್‌ಲೈನ್ ಮೀಟಿಂಗ್ ನಡೆಸುತ್ತಿದ್ದು, ಎಲ್ಲಾ ಉದ್ಯೋಗಿಗಳಿಗೆ ಕ್ಯಾಮೆರಾ ಆನ್ ಮಾಡಲು ಸೂಚಿಸುತ್ತಾರೆ.
ಈ ವೇಳೆ ಯುವತಿ ಕ್ಯಾಮೆರಾ ಆನ್ ಮಾಡುತ್ತಿದ್ದಂತೆ, ಆಕೆಯ ಮುಖದ ಮೇಲೆ ಫೇಸ್ ಪ್ಯಾಕ್ ಹಚ್ಚಿಕೊಂಡಿರುವುದು ಕಾಣಿಸುತ್ತದೆ. ಇದನ್ನು ನೋಡಿ ಮ್ಯಾನೇಜರ್, “ಈ ಕೆಲಸವನ್ನು ಲಂಚ್ ಬ್ರೇಕ್ ವೇಳೆ ಮಾಡಿಕೊಳ್ಳಿ. ಕೆಲಸದ ಸಮಯದಲ್ಲಿ ಹೀಗೆ ಮಾಡುವುದು ಸರಿಯಲ್ಲ” ಎಂದು ಸಮಾಧಾನದಿಂದ ಹೇಳುತ್ತಾರೆ.
ಆದರೆ ಯುವತಿ ಕೂಡ ತಕ್ಷಣವೇ ಉತ್ತರ ನೀಡುತ್ತಾಳೆ. “ನೀವು ಕೊಡುವುದು ಕೇವಲ 15 ನಿಮಿಷ ಬ್ರೇಕ್. ಆದರೆ ಈ ಫೇಸ್ ಪ್ಯಾಕ್ ಒಣಗಲು ಕನಿಷ್ಠ 20 ನಿಮಿಷ ಬೇಕು. ಈಗ ನಾನು ಕ್ಯಾಮೆರಾ ಆಫ್ ಮಾಡಬಹುದಾ?” ಎಂದು ಪ್ರಶ್ನಿಸುತ್ತಾಳೆ.
ಈ ಮಾತು ಕೇಳುತ್ತಿದ್ದಂತೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಯುವತಿಯ ಉತ್ತರವನ್ನು ಮೆಚ್ಚಿದ್ದಾರೆ. ಕೆಲವರು “ಕೆಲಸದ ಜೊತೆಗೆ ವೈಯಕ್ತಿಕ ಸಮಯಕ್ಕೂ ಮಹತ್ವ ಕೊಡಬೇಕು” ಎಂದರೆ, ಇನ್ನೂ ಕೆಲವರು “ಈ ಮ್ಯಾನೇಜರ್‌ಗೆ ಇಂಥ ಪರಿಸ್ಥಿತಿ ಹೊಸದಿರಬಹುದು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಈ ಯುವತಿಯ ಧೈರ್ಯಕ್ಕೆ ಸಲಾಂ” ಎಂದು ಪ್ರತಿಕ್ರಿಯಿಸಿದ್ದಾರೆ.