ನವದೆಹಲಿ: ಸ್ನೇಹ ದಿನದ ಪ್ರಯುಕ್ತ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಒಂದು ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರಿಯನ್ ಫಿಂಗರ್ ಹಾರ್ಟ್ ತೋರಿಸಿ ಯುವಕರಿಗೆ ಶುಭಾಶಯ ತಿಳಿಸಿದ ರಾಹುಲ್ ಗಾಂಧಿ, ವಿಶೇಷವಾಗಿ Gen-Z ಯುವಕರ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೊರಿಯನ್ ಫಿಂಗರ್ ಹಾರ್ಟ್ ತೋರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ನಾನು ಇನ್ನೂ ವಿದ್ಯಾರ್ಥಿ. ಪ್ರತಿದಿನ ಹೊಸದನ್ನು ಕಲಿಯುತ್ತಿದ್ದೇನೆ. ಇಂದಿನ ಪಾಠ… ಇದು ಫ್ರೆಂಡ್ಶಿಪ್ ಡೇ, ಇದು ಹಾರ್ಟ್’ ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ನ ಕೊನೆಯಲ್ಲಿ, ‘ಎಲ್ಲರಿಗೂ ಸ್ನೇಹ ದಿನದ ಶುಭಾಶಯಗಳು… ತುಂಬು ಪ್ರೀತಿಯಿಂದ’ ಎಂದು ಹೇಳಿ ಶುಭಾಶಯ ತಿಳಿಸಿದ್ದಾರೆ. ಈ ಪೋಸ್ಟ್ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ತಿರುಮಲದಲ್ಲಿ ಮುಡಿ ಕೊಟ್ಟ ಹಾರ್ದಿಕ್ ಪಾಂಡ್ಯ? ಗೆಳತಿ ಜೊತೆ ತಿಮ್ಮಪ್ಪನಿಗೆ ವಿಶೇಷ ಪೂಜೆ
ಕೊರಿಯನ್ ಫಿಂಗರ್ ಹಾರ್ಟ್ ಎನ್ನುವುದು ಹೆಬ್ಬೆರಳು ಮತ್ತು ತೋರು ಬೆರಳನ್ನು ಸೇರಿಸಿ ತೋರಿಸುವ ಸಣ್ಣ ಹೃದಯದ ಸಂಕೇತವಾಗಿದೆ. ದಕ್ಷಿಣ ಕೊರಿಯಾದ ಕೆ-ಪಾಪ್ ಸಂಸ್ಕೃತಿಯಿಂದ ಇದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಪ್ರೀತಿ, ಸ್ನೇಹ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಈ ಸನ್ನೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಸ್ನೇಹ ದಿನದಂದು ಇದೇ ಸಂಕೇತದ ಮೂಲಕ ಶುಭಾಶಯ ತಿಳಿಸಿರುವ ರಾಹುಲ್ ಗಾಂಧಿ ಅವರ ಪೋಸ್ಟ್ ಈಗ ಯುವಜನರಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ವಿಶೇಷವಾಗಿ Gen-Z ಬಳಕೆದಾರರು ಈ ಪೋಸ್ಟ್ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕಡಿಮೆಯಾಗುತ್ತಾ ಚಿನ್ನದ ಬೆಲೆ? ಬಂಗಾರದ ಸಂಗ್ರಹ ಹೆಚ್ಚಿಸಿದ ಆರ್ಬಿಐ..!