ವಯಸ್ಸು, ತೂಕ, ನೋಟ, ಕುಟುಂಬ, ವೃತ್ತಿಜೀವನದ ಹಿನ್ನಡೆ ಅಥವಾ ತಾಯ್ತನದ ವಿಚಾರ ಇಟ್ಟುಕೊಂಡು ಇತರರನ್ನು ಟ್ರೋಲ್ ಮಾಡುವವರ ವಿರುದ್ಧ ನಟ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಛಾಯಾಚಿತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ತೆಗೆಯುವ ಪೆಪರಾಜಿಗಳಿಗೂ ಅವರು ಎಚ್ಚರಿಕೆ ನೀಡಿದ್ದಾರೆ.
‘ಬಿಗ್ ಬಾಸ್ 20’ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಸಲ್ಮಾನ್ ಖಾನ್ ಟ್ರೋಲಿಂಗ್, ವಯಸ್ಸಿನ ಬಗ್ಗೆ ಮಾಡುವ ಟೀಕೆ ಮತ್ತು ದೇಹದ ಬಗ್ಗೆ ಕಾಮೆಂಟ್ ಮಾಡುವ ಪ್ರವೃತ್ತಿಯ ಕುರಿತು ಮಾತನಾಡಿದ್ದಾರೆ.
“ಇದ್ದಕ್ಕಿದ್ದಂತೆ ಎಲ್ಲರೂ ವಯಸ್ಸಿನ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಯಾರಾದರೂ ವಯಸ್ಸಾಗಿದ್ದಾರೆ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯನ್ನು ಏಕೆ ಟ್ರೋಲ್ ಮಾಡಬೇಕು? ಅವರ ತೂಕ, ನೋಟ, ಕುಟುಂಬ, ನಗು, ವೃತ್ತಿಜೀವನದ ವೈಫಲ್ಯ ಅಥವಾ ತಾಯಿಯಾಗುವುದನ್ನು ಇಟ್ಟುಕೊಂಡು ಏಕೆ ಟ್ರೋಲ್ ಮಾಡಬೇಕು?” ಎಂದು ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ದಂಪತಿಗೆ ಎರಡನೇ ಮಗು; ಹೆಣ್ಣು ಮಗುವಿನ ಆಗಮನ
ಇದೇ ವೇಳೆ ಗರ್ಭಿಣಿ ಮಹಿಳೆಯರ ದೇಹದ ಬಗ್ಗೆ ಮಾಡುವ ಕಾಮೆಂಟ್‌ಗಳನ್ನೂ ಅವರು ಖಂಡಿಸಿದ್ದಾರೆ. “ಗರ್ಭಿಣಿಯಾಗಿರುವ ಮಹಿಳೆಯನ್ನು ಏಕೆ ಟ್ರೋಲ್ ಮಾಡುತ್ತೀರಿ? ಗರ್ಭಾವಸ್ಥೆಯಲ್ಲಿ ಎಲ್ಲರೂ ತೂಕ ಹೆಚ್ಚಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಹೇಳಿಕೆ ನಟಿ ಕತ್ರಿನಾ ಕೈಫ್ ವಿರುದ್ಧ ಇತ್ತೀಚೆಗೆ ನಡೆದ ಬಾಡಿ ಶೇಮಿಂಗ್ ಟೀಕೆಗಳಿಗೂ ಸಂಬಂಧಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕತ್ರಿನಾ ಅವರ ತೂಕದ ಬಗ್ಗೆ ಕಾಮೆಂಟ್ ಮಾಡುತ್ತಿದ್ದವರಿಗೆ ಸಲ್ಮಾನ್ ಅವರ ಹೇಳಿಕೆ ಪರೋಕ್ಷ ಉತ್ತರವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರ ವೈಯಕ್ತಿಕ ಜೀವನ, ದೇಹದ ಬದಲಾವಣೆ ಅಥವಾ ತಾಯ್ತನವನ್ನು ಟ್ರೋಲಿಂಗ್‌ಗೆ ಬಳಸಿಕೊಳ್ಳಬಾರದು ಎಂಬ ಸಂದೇಶವನ್ನು ಸಲ್ಮಾನ್ ಖಾನ್ ತಮ್ಮ ಮಾತುಗಳ ಮೂಲಕ ನೀಡಿದ್ದಾರೆ.ಇದನ್ನೂ ಓದಿ: OnePlus 13s 16GB RAM ಬಿಡುಗಡೆ; Snapdragon 8 Elite, 50MP ಕ್ಯಾಮೆರಾ.. ವಿಶೇಷತೆಗಳೆನು?