BBK 13: ಕ್ಯಾರೆಕ್ಟರ್ ಲೆಸ್ ಎಂದ ಮಂಜ; ಗಂಡಸೇ ಅಲ್ಲ ಎಂದ ಕಾವ್ಯಾ.. ಆಗೋಯ್ತು ದೊಡ್ಡ ಜಗಳ

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ನಾಮಿನೇಷನ್‌ಗೂ ಮುನ್ನವೇ ದೊಡ್ಮನೆಯಲ್ಲಿ ಕಿರಿಕ್ ಜೋರಾಗಿದೆ. ನಾಮಿನೇಷನ್‌ಗಾಗಿ ನಡೆದ ಟಾಸ್ಕ್‌ವೊಂದು ಮಂಜು ಹಾಗೂ ಕಾವ್ಯಾ ಗೌಡ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ.

ಟಾಸ್ಕ್ ವೇಳೆ ಸೌಂದರ್ಯ ಶೆಟ್ಟಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ಮಂಜು ಬಳಸಿದ ‘ಕ್ಯಾರೆಕ್ಟರ್ ಲೆಸ್’ ಎಂಬ ಪದ ಕಾವ್ಯಾ ಅವರನ್ನು ಕೆರಳಿಸಿದೆ.

ಮಂಜು ಮಾತಿಗೆ ರೊಚ್ಚಿಗೆದ್ದ ಕಾವ್ಯಾ, “ಎಲ್ಲರೂ ಕ್ಯಾರೆಕ್ಟರ್ ಲೆಸ್, ನೀನೊಬ್ಬ ಮಾತ್ರ ಕ್ಯಾರೆಕ್ಟರ್ ಇರೋನಾ ಇಲ್ಲಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಂಜು ಕೂಡ ಕೌಂಟರ್ ಕೊಟ್ಟು ಕಾವ್ಯಾ ಅವರನ್ನು ಕೆಣಕಿದ್ದಾರೆ.

ಇದರಿಂದ ಇಬ್ಬರ ನಡುವಿನ ಮಾತಿನ ಚಕಮಕಿ ಮತ್ತಷ್ಟು ಜೋರಾಗಿದೆ. ಕಾವ್ಯಾ ಕೂಡ ಹಿಂದೆ ಸರಿಯದೆ, “ಚೆನ್ನಾಗಿ ಜಾಲಾಡಿಸಿಬಿಡ್ತೀನಿ” ಎಂದು ಖಾರವಾಗಿ ಎಚ್ಚರಿಕೆ ನೀಡಿದ್ದಾರೆ.

ಇಷ್ಟಕ್ಕೇ ಜಗಳ ನಿಂತಿಲ್ಲ. ಮಾತಿನ ಸಮರ ಮತ್ತಷ್ಟು ವೈಯಕ್ತಿಕ ಹಂತಕ್ಕೆ ಹೋಗಿದೆ. ಮಂಜು, ತಮ್ಮ ಬಗ್ಗೆ ಮಾತನಾಡಲು ಬಂದರೆ “ನೀನು ಹೆಣ್ಣೇ ಅಲ್ಲ” ಎಂದು ಹೇಳುವುದಾಗಿ ತಿರುಗೇಟು ನೀಡಿದ್ದಾರೆ.

ಇದಕ್ಕೆ ಕಾವ್ಯಾ ಕೂಡ ಖಡಕ್ ಕೌಂಟರ್ ಕೊಟ್ಟಿದ್ದು, “ನೀನು ಗಂಡ್ಸೇ ಅಲ್ಲ” ಎಂದು ಹೇಳಿದ್ದಾರೆ.

ಹೀಗಾಗಿ ಮೊದಲ ನಾಮಿನೇಷನ್ ಪ್ರಕ್ರಿಯೆಗೂ ಮುನ್ನವೇ ಬಿಗ್‌ಬಾಸ್ ಮನೆಯ ವಾತಾವರಣ ಬಿಸಿಯಾಗಿದೆ. ಟಾಸ್ಕ್‌ಗಾಗಿ ಶುರುವಾದ ಮಾತಿನ ಚಕಮಕಿ ಇದೀಗ ವೈಯಕ್ತಿಕ ವಿಚಾರದವರೆಗೂ ತಲುಪಿದೆ.

ಈ ಜಗಳ ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ಜೋರಾಗುತ್ತಾ? ನಾಮಿನೇಷನ್ ಟಾಸ್ಕ್‌ನಿಂದ ಶುರುವಾದ ಕಿರಿಕ್‌ ಹೇಗೆ ಮುಂದುವರಿಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *