ಸಿನಿಮಾ ಹಾಗೂ ಕ್ರಿಕೆಟ್ ಫ್ಯಾನ್ಸ್ ನಡುವೆ ಈಗ ಮತ್ತೊಂದು ಮದುವೆ ಸುದ್ದಿ ಸದ್ದು ಮಾಡುತ್ತಿದೆ. ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂಬ ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ.
ಮೂಲಗಳ ಪ್ರಕಾರ, ಇದೇ ನವೆಂಬರ್ 10ರಂದು ಗ್ರೀಸ್‌ನಲ್ಲಿ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅನಿರುದ್ಧ್ ಅಥವಾ ಕಾವ್ಯಾ ಮಾರನ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇತ್ತೀಚೆಗೆ ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ.ಜಿ. ಮಹೇಂದ್ರನ್ ಕೂಡ ಅನಿರುದ್ಧ್ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂದು ಹೇಳಿದ್ದರು. “ಶೀಘ್ರದಲ್ಲೇ ಅನಿರುದ್ಧ್ ಮದುವೆಯಾಗಲಿದ್ದಾರೆ” ಎಂಬ ಅವರ ಹೇಳಿಕೆಯ ಬಳಿಕ ಇದೀಗ ಕಾವ್ಯಾ ಮಾರನ್ ಹೆಸರು ಮತ್ತೆ ಕೇಳಿಬರುತ್ತಿದೆ.
ಕಳೆದ ಒಂದು ವರ್ಷದಿಂದಲೇ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಡುವೆ ಪ್ರೀತಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರೂ ವಿದೇಶದಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ, ಡಿನ್ನರ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಇವರಿಬ್ಬರ ಸಂಬಂಧಕ್ಕೆ ಕುಟುಂಬದವರ ಒಪ್ಪಿಗೆಯೂ ಸಿಕ್ಕಿದೆ ಎಂಬ ಮಾತುಗಳು ಕೇಳಿಬಂದಿವೆ.
ಇದೀಗ 33 ವರ್ಷದ ಕಾವ್ಯಾ ಮಾರನ್ ಹಾಗೂ 35 ವರ್ಷದ ಅನಿರುದ್ಧ್ ಮದುವೆ ಸುದ್ದಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಐಪಿಎಲ್ ವೇಳೆ ಕಾವ್ಯಾ ಮಾರನ್‌ರನ್ನು ನೋಡೋದು ಒಂದು ಕಡೆ, ಸಿನಿಮಾಗಳಲ್ಲಿ ಅನಿರುದ್ಧ್ ಸಂಗೀತ ಕೇಳೋದು ಮತ್ತೊಂದು ಕಡೆ. ಹೀಗಾಗಿ ಈ ಇಬ್ಬರು ನಿಜಕ್ಕೂ ಒಂದಾಗುತ್ತಾರಾ ಎಂಬ ಪ್ರಶ್ನೆ ಇದೀಗ ಮತ್ತೆ ಚರ್ಚೆಯಾಗುತ್ತಿದೆ.
ಆದರೆ ನವೆಂಬರ್ 10ರ ಮದುವೆ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ಅನಿರುದ್ಧ್ ಅಥವಾ ಕಾವ್ಯಾ ಮಾರನ್ ಅವರಿಂದ ಸ್ಪಷ್ಟನೆ ಬಂದ ಬಳಿಕವೇ ಈ ವದಂತಿಗೆ ಅಂತಿಮ ಉತ್ತರ ಸಿಗಲಿದೆ.