Toxic Movie: ‘ಟಾಕ್ಸಿಕ್’ಗೆ ಫಸ್ಟ್ ಡೇ ಫಸ್ಟ್ ಶೋ; ಯಶ್ ಎಂಟ್ರಿಗೆ ಥಿಯೇಟರ್ಗಳಲ್ಲಿ ಸೌಂಡ್ ಜೋರು!
Share this… Facebook Whatsapp Telegram Pinterest Twitter LinkedinToxic Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಬರೋಬ್ಬರಿ ನಾಲ್ಕುವರೆ ವರ್ಷಗಳ ಬಳಿಕ ಯಶ್ರನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡುತ್ತಿರುವ ಖುಷಿಯಲ್ಲಿ ಫ್ಯಾನ್ಸ್ ಸಂಭ್ರಮ ಜೋರಾಗಿದೆ. ಕರ್ನಾಟಕದಲ್ಲೂ ಚಿತ್ರದ ಕ್ರೇಜ್ ಜೋರಾಗಿದ್ದು, 500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ‘ಟಾಕ್ಸಿಕ್’ ತೆರೆಕಂಡಿದೆ. ಮುಂಜಾನೆಯಿಂದಲೇ ಅಭಿಮಾನಿಗಳು ಥಿಯೇಟರ್ಗಳ ಮುಂದೆ ಜಮಾಯಿಸಿ ಫಸ್ಟ್ ಶೋ ನೋಡಲು ಕಾತರದಿಂದ ಕಾಯುತ್ತಿದ್ದರು. ಬೆಂಗಳೂರಿನ ಮಾಗಡಿ…