Ramayana: ರಾವಣ ಜಟಾಯುವಿನ ಉಗುರು ತೆಗೆದುಕೊಂಡಿದ್ದೇಕೆ? ರಾಮಾಯಣದ ಈ ಕಥೆಯ ಹಿಂದಿನ ಸತ್ಯವೇನು?
Share this… Facebook Whatsapp Telegram Pinterest Twitter LinkedinRamayana: ರಾಮಾಯಣದಲ್ಲಿ ಸೀತೆಯ ಅಪಹರಣದ ಪ್ರಸಂಗ ಅತ್ಯಂತ ಪ್ರಮುಖವಾದುದು. ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುತ್ತಿದ್ದಾಗ, ಆಕೆಯನ್ನು ರಕ್ಷಿಸಲು ಪಕ್ಷಿರಾಜ ಜಟಾಯು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಾನೆ. ವಯಸ್ಸನ್ನು ಲೆಕ್ಕಿಸದೆ ರಾವಣನಂತಹ ಪರಾಕ್ರಮಿಯ ವಿರುದ್ಧ ಸೆಣಸಾಡುತ್ತಾನೆ. ಈ ಹೋರಾಟದಲ್ಲಿ ಗಂಭೀರವಾಗಿ ಗಾಯಗೊಂಡು ಕೊನೆಗೆ ಪ್ರಾಣ ಬಿಡುತ್ತಾನೆ. ಆದರೆ ಜಟಾಯು ಮತ್ತು ರಾವಣನ ನಡುವಿನ ಯುದ್ಧದ ಬಗ್ಗೆ ಮತ್ತೊಂದು ಕುತೂಹಲಕಾರಿ ಕಥೆಯೂ ಜನಪ್ರಿಯವಾಗಿದೆ. ಅದೇನೆಂದರೆ, ಜಟಾಯುವನ್ನು ಸೋಲಿಸಿದ ಬಳಿಕ…