ಅಪಾಯಮಟ್ಟ ಮೀರಿದ ಗಂಗಾ ನದಿ; ಬಿಹಾರದಲ್ಲಿ ಪ್ರವಾಹದ ಮುಳುಗಡೆ ಭೀತಿ
Share this… Facebook Whatsapp Telegram Pinterest Twitter Linkedin ಪಾಟ್ನಾ: ನೇಪಾಳ ಮತ್ತು ನೆರೆಯ ಜಾರ್ಖಂಡ್ನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ವಾರಣಾಸಿಯಲ್ಲಿ ಗಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬಿಹಾರದಲ್ಲೂ ಪ್ರವಾಹದ ಆತಂಕ ಹೆಚ್ಚಾಗಿದೆ. ಗಂಗಾ, ಗಂಡಕ, ಕೋಸಿ, ಬುರ್ಹಿ ಗಂಡಕ, ಬಾಗ್ಮತಿ, ಪುನಪುನ್ ಮತ್ತು ಘಘ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ….