ಬದರಿನಾಥ ದೇಗುಲದ ಬಾಗಿಲು ಮುಚ್ಚುವಾಗ ಅರ್ಚಕರೇ ಮಹಿಳೆಯ ವೇಷ ಧರಿಸುವುದೇಕೆ? ಅಚ್ಚರಿ ವಿಷಯ ಏನದು?
Share this… Facebook Whatsapp Telegram Pinterest Twitter Linkedinಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯು ಹಿಂದೂಗಳಿಗೆ ಅತ್ಯಂತ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಇವುಗಳಲ್ಲಿ ಶ್ರೀಮನ್ನಾರಾಯಣನಿಗೆ ಸಮರ್ಪಿತವಾದ ಬದರಿನಾಥ ಧಾಮ ಪ್ರಮುಖವಾದುದು. ಚಳಿಗಾಲದಲ್ಲಿ ವಿಪರೀತ ಹಿಮಪಾತ ಮತ್ತು ಕೊರೆಯುವ ಚಳಿಯ ಕಾರಣದಿಂದ ಈ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಅದರಂತೆ, ನವೆಂಬರ್ 16ರಂದು ರಾತ್ರಿ 9:37ಕ್ಕೆ ಬದರಿನಾಥ ದೇವಾಲಯದ ದ್ವಾರಗಳನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗಿದೆ….