ಜೈಸ್ವಾಲ್ ಜೊತೆ ಡೇಟಿಂಗ್ ವದಂತಿ; ಮೃಣಾಲ್ ಠಾಕೂರ್ ಕೊಟ್ರು ಖಡಕ್ ಉತ್ತರ

ನಟಿ ಮೃಣಾಲ್ ಠಾಕೂರ್‌ ಹಾಗೂ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್‌ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಒಂದೇ ಉಪಹಾರ ಗೃಹದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದೇ ಈ ಗಾಸಿಪ್‌ಗೆ ಕಾರಣವಾಗಿತ್ತು. ಇದೀಗ ಮೃಣಾಲ್ ಠಾಕೂರ್ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಸಾಕ್ಷಿಯಿಲ್ಲದೆ ಸುಳ್ಳು ಸುದ್ದಿ ಹರಡಬೇಡಿ ಎಂದು ಹೇಳಿದ್ದಾರೆ.

ಮೃಣಾಲ್ ಠಾಕೂರ್ ಅವರ ಹೆಸರು ಈ ಹಿಂದೆ ಕೂಡ ಹಲವು ಸೆಲೆಬ್ರಿಟಿಗಳ ಜೊತೆ ತಳುಕು ಹಾಕಲಾಗಿತ್ತು. ಇದೀಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿ ಚರ್ಚೆಗೆ ಬಂದಿದೆ. ಇಬ್ಬರೂ ಒಂದೇ ದಿನ ಒಂದೇ ಕೆಫೆಯಲ್ಲಿ ಇದ್ದರು ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೃಣಾಲ್, ʻಸ್ವಲ್ಪ ಶಾಂತರಾಗಿ. ನಾವು ಒಟ್ಟಿಗೆ ಎಲ್ಲಿದ್ದೇವೆ ಎಂದು ತೋರಿಸಿ? ವಿದ್ಯಾವಂತರಾಗಿದ್ದುಕೊಂಡು ಇಂತಹ ವದಂತಿಗಳನ್ನು ಹೇಗೆ ನಂಬುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ದೇಶದಲ್ಲಿ ಚರ್ಚಿಸಬೇಕಾದ ಹಲವು ಪ್ರಮುಖ ವಿಷಯಗಳಿವೆ. ಯುವ ಪೀಳಿಗೆಯಿಂದ ಒಳ್ಳೆಯ ವಿಷಯಗಳನ್ನು ಕಲಿಯಿರಿ. ಉಪಯುಕ್ತ ವಿಚಾರಗಳ ಬಗ್ಗೆ ಧ್ವನಿ ಎತ್ತಿ ಎಂದು ನಟಿ ಕಿವಿಮಾತು ಹೇಳಿದ್ದಾರೆ. ಈ ಕಾಮೆಂಟ್ ಅನ್ನು ನಂತರ ಅವರು ಡಿಲೀಟ್ ಮಾಡಿದ್ದರೂ, ಅದರ ಸ್ಕ್ರೀನ್‌ಶಾಟ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಂಟ್ ಬಾಲಿವುಡ್ ಹಂಚಿಕೊಂಡಿದ್ದ ವಿಡಿಯೋ ಈ ವದಂತಿಗೆ ಮತ್ತಷ್ಟು ಕಾರಣವಾಗಿತ್ತು. 24 ವರ್ಷದ ಜೈಸ್ವಾಲ್ ಹಾಗೂ 34 ವರ್ಷದ ಮೃಣಾಲ್ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ವಿಡಿಯೋ ಹರಿದಾಡಿತ್ತು. ಆದರೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಖಚಿತ ಸಾಕ್ಷಿ ಹೊರಬಂದಿಲ್ಲ.

ಮೃಣಾಲ್ ಠಾಕೂರ್ ಅವರ ಹೆಸರು ಈ ಹಿಂದೆ ನಟ ಧನುಷ್ ಜೊತೆಗೂ ತಳುಕು ಹಾಕಲಾಗಿತ್ತು. ಆದರೆ ಆ ಸುದ್ದಿಯೂ ಬಳಿಕ ಸುಳ್ಳು ಎಂದು ತಿಳಿದುಬಂದಿತ್ತು. ಇದೀಗ ಯಶಸ್ವಿ ಜೈಸ್ವಾಲ್ ವಿಚಾರದಲ್ಲೂ ನಟಿ ನೇರವಾಗಿ ಪ್ರತಿಕ್ರಿಯಿಸುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

Leave a Reply

Your email address will not be published. Required fields are marked *