ಮಳೆಗಾಲದಲ್ಲಿ ಹೊರಗೆ ಹೋಗುವಾಗ ಮೊಬೈಲ್ ಒದ್ದೆಯಾಗುವುದು ಅಥವಾ ಆಕಸ್ಮಿಕವಾಗಿ ನೀರಿಗೆ ಬೀಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ಹಲವರು ತಕ್ಷಣ ಫೋನ್ ಆನ್ ಮಾಡುವುದು ಅಥವಾ ಚಾರ್ಜ್‌ಗೆ ಹಾಕುವ ತಪ್ಪು ಮಾಡುತ್ತಾರೆ. ಆದರೆ ಅದರಿಂದ ಫೋನ್‌ಗೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ. ಸರಿಯಾದ ಕ್ರಮ ತೆಗೆದುಕೊಂಡರೆ ದುಬಾರಿ ರಿಪೇರಿ ವೆಚ್ಚ ತಪ್ಪಿಸಬಹುದು.
ಮೊಬೈಲ್ ನೀರಿನಲ್ಲಿ ಒದ್ದೆಯಾದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಒದ್ದೆಯಾದ ಸ್ಥಿತಿಯಲ್ಲಿ ಫೋನ್ ಆನ್ ಇದ್ದರೆ ಶಾರ್ಟ್ ಸರ್ಕ್ಯೂಟ್ ಆಗಿ ಮದರ್‌ಬೋರ್ಡ್ ಹಾನಿಯಾಗಬಹುದು.
ಅದರ ನಂತರ ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಮತ್ತು ಸಿಮ್ ಟ್ರೇ ಇದ್ದರೆ ತೆಗೆದುಹಾಕಿ. ಇದರಿಂದ ಫೋನ್ ಒಳಗಿನ ತೇವಾಂಶ ಬೇಗ ಒಣಗಲು ಸಹಾಯವಾಗುತ್ತದೆ.
ನಂತರ ಒಣಗಿದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಬಳಸಿ ಫೋನ್ ಮೇಲಿರುವ ನೀರನ್ನು ನಿಧಾನವಾಗಿ ಒರೆಸಿ. ಆದರೆ ಹೇರ್ ಡ್ರೈಯರ್ ಅಥವಾ ಬಿಸಿ ಗಾಳಿಯನ್ನು ಬಳಸಬೇಡಿ. ಅದು ಫೋನ್‌ನ ಒಳಗಿನ ಭಾಗಗಳಿಗೆ ಹಾನಿ ಮಾಡಬಹುದು.
ಫೋನ್ ಅನ್ನು ಒಣಗಿದ ಮತ್ತು ಗಾಳಿ ಬೀಸುವ ಸ್ಥಳದಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ. ಅಕ್ಕಿಯಲ್ಲಿ ಇಡುವ ವಿಧಾನವನ್ನು ಹಲವರು ಅನುಸರಿಸುತ್ತಾರೆ. ಆದರೆ ಅದು ಎಲ್ಲ ಸಂದರ್ಭದಲ್ಲೂ ಪರಿಣಾಮಕಾರಿ ಎನ್ನುವುದಿಲ್ಲ.
ಒದ್ದೆಯಾದ ಫೋನ್ ಅನ್ನು ಕನಿಷ್ಠ 48 ಗಂಟೆಗಳವರೆಗೆ ಚಾರ್ಜ್ ಮಾಡಬೇಡಿ. ಬೇಗ ಚಾರ್ಜ್‌ಗೆ ಹಾಕಿದರೆ ಬ್ಯಾಟರಿ ಅಥವಾ ಇತರ ಹಾರ್ಡ್‌ವೇರ್‌ಗೆ ಹಾನಿಯಾಗುವ ಸಾಧ್ಯತೆ ಇದೆ.
ಅದೇ ರೀತಿ 48ರಿಂದ 72 ಗಂಟೆಗಳವರೆಗೆ ಫೋನ್ ಆನ್ ಮಾಡಲು ಪ್ರಯತ್ನಿಸಬೇಡಿ. ಸಂಪೂರ್ಣವಾಗಿ ಒಣಗಿದ ಬಳಿಕ ಮಾತ್ರ ಆನ್ ಮಾಡಿ ಪರೀಕ್ಷಿಸುವುದು ಸುರಕ್ಷಿತ.
IP67 ಅಥವಾ IP68 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಇರುವ ಫೋನ್‌ಗಳಿಗೂ ನೀರಿನಲ್ಲಿ ಹೆಚ್ಚು ಸಮಯ ಇದ್ದರೆ ಹಾನಿಯಾಗಬಹುದು. ಫೋನ್ ಒಣಗಿದ ನಂತರವೂ ಕೆಲಸ ಮಾಡದಿದ್ದರೆ ಅಥವಾ ಚಾರ್ಜಿಂಗ್ ಸಮಸ್ಯೆ ಇದ್ದರೆ, ಸ್ವತಃ ತೆರೆಯುವ ಬದಲು ಅಧಿಕೃತ ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋಗುವುದು ಉತ್ತಮ.