ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ದಂಪತಿಗೆ ಎರಡನೇ ಮಗು; ಹೆಣ್ಣು ಮಗುವಿನ ಆಗಮನ

ಬಾಲಿವುಡ್‌ನ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೆ ಎರಡನೇ ಮಗು ಜನಿಸಿದೆ. ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 19, 2026ರಂದು ಹೆಣ್ಣು ಮಗು ಜನಿಸಿರುವುದಾಗಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಅವರು ಮಗುವಿನ ಪುಟ್ಟ ಹೆಜ್ಜೆಗುರುತಿನ ಚಿತ್ರವನ್ನು ಹಂಚಿಕೊಂಡಿದ್ದು, “ಸ್ವಾಗತ ಬೇಬಿ ಗರ್ಲ್” ಎಂದು ಸಂತಸದ ಸುದ್ದಿಯನ್ನು ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ ದುವಾ, ದೀಪಿಕಾ ಮತ್ತು ರಣವೀರ್ ಅವರ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.

ಈ ಸುದ್ದಿ ಹೊರಬರುತ್ತಿದ್ದಂತೆ ಅಭಿಮಾನಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಕೃತಿ ಸನೋನ್, ಶ್ರೇಯಾ ಘೋಷಾಲ್, ಧನಶ್ರೀ ಸೇರಿದಂತೆ ಹಲವು ಗಣ್ಯರು ಅಭಿನಂದನೆ ತಿಳಿಸಿದ್ದಾರೆ. ಆಲಿಯಾ ಭಟ್, ವರುಣ್ ಧವನ್, ಇಶಾನ್ ಖಟ್ಟರ್, ಕಿಯಾರಾ ಅಡ್ವಾಣಿ, ಅನನ್ಯ ಪಾಂಡೆ ಸೇರಿದಂತೆ ಹಲವರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ

ಹೆಣ್ಣು ಮಗು ಜನಿಸುವ ಒಂದು ದಿನ ಮೊದಲು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ದೇವಸ್ಥಾನಕ್ಕೆ ತೆರಳಿದ ದಂಪತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ವೇಳೆ ದೀಪಿಕಾ ರಣವೀರ್ ಅವರ ಕೈ ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸುತ್ತಿರುವುದು ಕಂಡುಬಂದಿತ್ತು.

ದೀಪಿಕಾ ಕಿತ್ತಳೆ ಮತ್ತು ನೇರಳೆ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರೆ, ರಣವೀರ್ ಸಿಂಗ್ ನೇರಳೆ ಬಣ್ಣದ ಕುರ್ತಾ ಧರಿಸಿದ್ದರು. ದಂಪತಿಯ ಈ ದೇವಸ್ಥಾನ ಭೇಟಿಯ ಬೆನ್ನಲ್ಲೇ ಇದೀಗ ಎರಡನೇ ಮಗುವಿನ ಆಗಮನದ ಸುದ್ದಿ ಹೊರಬಂದಿದೆ.

ದೀಪಿಕಾ ಮತ್ತು ರಣವೀರ್ ದಂಪತಿಗೆ ಈಗಾಗಲೇ ದುವಾ ಎಂಬ ಹೆಣ್ಣು ಮಗು ಇದ್ದು, ಇದೀಗ ಮತ್ತೊಂದು ಹೆಣ್ಣು ಮಗುವಿನ ಆಗಮನದಿಂದ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

Leave a Reply

Your email address will not be published. Required fields are marked *