ಮಂಗಳಸೂತ್ರ ಖರೀದಿಗೆ ಶುಭ ದಿನ ಯಾವುದು? ಈ ದಿನಗಳಲ್ಲಿ ಮಾತ್ರ ಖರೀದಿಸಿದ್ರೆ ಒಳ್ಳೆಯದು
Share this… Facebook Whatsapp Telegram Pinterest Twitter Linkedinಬೆಂಗಳೂರು: ಮಂಗಳಸೂತ್ರವು ವಿವಾಹಿತ ಮಹಿಳೆಯರ ಪಾಲಿಗೆ ಕೇವಲ ಆಭರಣವಲ್ಲ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ದಾಂಪತ್ಯ ಜೀವನ, ಪತಿ-ಪತ್ನಿಯ ಬಾಂಧವ್ಯ ಮತ್ತು ಶುಭದ ಸಂಕೇತವಾಗಿ ಮಂಗಳಸೂತ್ರವನ್ನು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳಸೂತ್ರದಲ್ಲಿರುವ ಚಿನ್ನವು ಪಾರ್ವತಿ ದೇವಿಯನ್ನು ಹಾಗೂ ಕಪ್ಪು ಮಣಿಗಳು ಶಿವನನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಶಿವ-ಪಾರ್ವತಿಯ ಆಶೀರ್ವಾದದಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ. ಮಂಗಳಸೂತ್ರದಲ್ಲಿರುವ…