ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ; ಇನ್ಮುಂದೆ ಬಿಸಿಯೂಟದಲ್ಲಿ ಬಿಸಿ ಬಿಸಿ ಇಡ್ಲಿ-ಸಾಂಬಾರ್!

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಮಕ್ಕಳಿಗೆ ಹೆಚ್ಚು ಪೌಷ್ಟಿಕ ಹಾಗೂ ರುಚಿಕರ ಆಹಾರ ನೀಡುವ ಉದ್ದೇಶದಿಂದ ಇನ್ಮುಂದೆ ಶಾಲಾ ಊಟದ ಮೆನುವಿನಲ್ಲಿ ಇಡ್ಲಿ-ಸಾಂಬಾರ್ ಕೂಡ ಇರಲಿದೆ.

ಪರಿಷ್ಕೃತ   ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಹೊಸ ಮೆನುವನ್ನು ಇದೇ ತಿಂಗಳ 24ರೊಳಗೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮಕ್ಕಳಿಗೆ ನೀಡುವ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ನೀಡಲಾಗುತ್ತಿದ್ದ ರಾಗಿ ಹಲ್ವಾ ಬದಲಿಗೆ ಗೋಧಿ ಹಿಟ್ಟು ಮತ್ತು ಕಡಲೆ ಮಸಾಲ ನೀಡಲಾಗುತ್ತದೆ. ಖಿಚಡಿ ಬದಲಿಗೆ ಜೋಳ ಮತ್ತು ಸಜ್ಜೆಯಿಂದ ತಯಾರಿಸಿದ ಆರೋಗ್ಯಕರ ಖಾದ್ಯಗಳನ್ನು ಸೇರಿಸಲಾಗಿದೆ.

ಆರು ದಿನಗಳ ಹೊಸ ಮೆನು ಹೇಗಿದೆ?

ಮೊದಲ ದಿನ: ಪೂರಿ, ಕಪ್ಪು ಗ್ರಾಂ ಗ್ರೇವಿ ಮತ್ತು ಬೇಯಿಸಿದ ತರಕಾರಿ.

ಎರಡನೇ ದಿನ: ಇಡ್ಲಿ-ಸಾಂಬಾರ್.

ಮೂರನೇ ದಿನ: ಅನ್ನ, ಚೋಳೆ ಮತ್ತು ಬೇಯಿಸಿದ ತರಕಾರಿ.

ನಾಲ್ಕನೇ ದಿನ: ಪೂರಿ, ಚೋಳೆ ಮತ್ತು ಬೇಯಿಸಿದ ತರಕಾರಿ.

ಐದನೇ ದಿನ: ಅನ್ನ ಮತ್ತು ಬೇಳೆ.

ಆರನೇ ದಿನ: ಸಾದಾ ಅನ್ನ.

ಪಿಎಂ-ಪೋಷಣ್‌ ಯೋಜನೆಯಡಿ ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಈ ಪರಿಷ್ಕೃತ ಮೆನು ಕಡ್ಡಾಯವಾಗಿರಲಿದೆ. ಇಡ್ಲಿ-ಸಾಂಬಾರ್‌ ಜಾರಿಗೆ ಯಾವುದೇ ಹೆಚ್ಚುವರಿ ಸಮಯ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೆ ಎಲ್ಲಾ ಶಾಲೆಗಳಲ್ಲೂ ಒಂದೇ ದಿನ ಒಂದೇ ಖಾದ್ಯವನ್ನು ನೀಡಬೇಕು ಎಂಬ ನಿಯಮವಿಲ್ಲ. ಅಡುಗೆ ಸಾಮಗ್ರಿಗಳ ಲಭ್ಯತೆ, ಸಾರಿಗೆ ವ್ಯವಸ್ಥೆ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ಶಾಲೆಗಳು ಮೆನುವಿನಲ್ಲಿರುವ ಅನುಮೋದಿತ ಖಾದ್ಯಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಆದರೂ ಆರು ದಿನಗಳ ಪರಿಷ್ಕೃತ ಮೆನುವನ್ನು ಪ್ರತಿಯೊಂದು ಶಾಲೆಯೂ ಕಡ್ಡಾಯವಾಗಿ ಅನುಸರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *