ಭಾರತದಲ್ಲಿ ಪಾಕಿಸ್ತಾನಿ ವೆಬ್‌ಸಿರೀಸ್ ಪ್ರಸಾರ ಮಾಡದಂತೆ ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸೂಚನೆ!

ನವದೆಹಲಿ: ಪಾಕಿಸ್ತಾನದ ಹೊಸ ವೆಬ್‌ಸಿರೀಸ್‌ವೊಂದು ಭಾರತದಲ್ಲಿ ಬಿಡುಗಡೆಯಾಗುವ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಫವಾದ್ ಖಾನ್ ಮತ್ತು ಮಹಿರಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜೋ ಬಚೇ ಹೈ ಸಾಂ ಸಮೇತ್ ಲೋ’ (Jo Bachay Hain Sang Samait Lo) ವೆಬ್‌ಸಿರೀಸ್‌ ಅನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ.

ಈ ವೆಬ್‌ಸಿರೀಸ್ ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ ಭಾರತದಲ್ಲಿ ಇದರ ಪ್ರಸಾರಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಕಡೆಯಿಂದ ಈವರೆಗೆ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.

ಈ ಹಿಂದೆಯೇ ಹೊರಬಿದ್ದಿತ್ತು ಸೂಚನೆ

2025ರ ಮೇ 8ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪಾಕಿಸ್ತಾನಿ ಕಂಟೆಂಟ್ ಪ್ರಸಾರಕ್ಕೆ ಸಂಬಂಧಿಸಿದಂತೆ ಸಲಹಾ ಸೂಚನೆ ಹೊರಡಿಸಿತ್ತು. ಪಾಕಿಸ್ತಾನ ಮೂಲದ ವೆಬ್‌ಸಿರೀಸ್, ಸಿನಿಮಾಗಳು, ಹಾಡುಗಳು ಮತ್ತು ಪಾಡ್‌ಕಾಸ್ಟ್‌ಗಳನ್ನು ಪ್ರಸಾರ ಮಾಡದಂತೆ ಡಿಜಿಟಲ್ ವೇದಿಕೆಗಳಿಗೆ ಸೂಚಿಸಲಾಗಿತ್ತು. ಇದೀಗ ಅದೇ ಸೂಚನೆಯ ಪಾಲನೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ.

ಏನಿದು ಹೊಸ ವೆಬ್‌ಸಿರೀಸ್?

‘ಜೋ ಬಚೇ ಹೈ ಸಾಂ ಸಮೇತ್ ಲೋ’ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಆಲ್ ದಿ ಲವ್ ಅವರ್ ಹಾರ್ಟ್ಸ್ ಕ್ಯಾರಿ’ (All the Love Our Hearts Carry) ಎಂಬ ಹೆಸರಿನಲ್ಲೂ ಪ್ರಚಾರವಾಗಿದೆ. ಪಾಕಿಸ್ತಾನದ ಖ್ಯಾತ ಲೇಖಕಿ ಫರ್ಹತ್ ಇಶ್ತಿಯಾಕ್ ಬರೆದ ಇದೇ ಹೆಸರಿನ ಜನಪ್ರಿಯ ಉರ್ದು ಕಾದಂಬರಿಯನ್ನು ಆಧರಿಸಿ ಈ ಪ್ರಣಯ ಕಥೆಯನ್ನು ನಿರ್ಮಿಸಲಾಗಿದೆ.

ಈ ಸರಣಿಯಲ್ಲಿ ಫವಾದ್ ಖಾನ್, ಮಹಿರಾ ಖಾನ್, ಸನಮ್ ಸಯೀದ್, ಅಹದ್ ರಜಾ ಮಿರ್, ಹನಿಯಾ ಆಮಿರ್ ಸೇರಿದಂತೆ ಹಲವು ಪಾಕಿಸ್ತಾನಿ ಕಲಾವಿದರು ನಟಿಸಿದ್ದಾರೆ. ಪಾಕಿಸ್ತಾನ, ಇಟಲಿ ಮತ್ತು ಬ್ರಿಟನ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನೆಟ್‌ಫ್ಲಿಕ್ಸ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಮೂಲಕ ಈ ಸರಣಿಯನ್ನು ನಿರ್ಮಿಸಲಾಗಿದೆ.

ಚಲನಚಿತ್ರ ಕಾರ್ಮಿಕರ ಸಂಘದಿಂದಲೂ ವಿರೋಧ

ಇನ್ನೊಂದೆಡೆ, ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಸಂಘ (AICWA) ಕೂಡ ಈ ವೆಬ್‌ಸಿರೀಸ್ ಪ್ರಸಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ಸರಣಿಯನ್ನು ನೆಟ್‌ಫ್ಲಿಕ್ಸ್‌ನ ಭಾರತೀಯ ಕಂಟೆಂಟ್ ಪಟ್ಟಿಯಿಂದ ತೆಗೆದುಹಾಕುವಂತೆ ಸಂಘ ಒತ್ತಾಯಿಸಿದೆ.

ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನೆಟ್‌ಫ್ಲಿಕ್ಸ್‌ನ ಭಾರತ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಮತ್ತು ದೇಶಾದ್ಯಂತ ಬಹಿಷ್ಕಾರ ಅಭಿಯಾನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.

ಹೀಗಾಗಿ ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ವೆಬ್‌ಸಿರೀಸ್ ಭಾರತದಲ್ಲಿ ಪ್ರಸಾರವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ನ ಅಧಿಕೃತ ನಿರ್ಧಾರಕ್ಕಾಗಿ ಕಾಯಬೇಕಿದೆ.

ಪಾಕಿಸ್ತಾನದ ಹೊಸ ವೆಬ್‌ಸಿರೀಸ್‌ವೊಂದು ಭಾರತದಲ್ಲಿ ಬಿಡುಗಡೆಯಾಗುವ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಫವಾದ್ ಖಾನ್ ಮತ್ತು ಮಹಿರಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜೋ ಬಚೇ ಹೈ ಸಾಂ ಸಮೇತ್ ಲೋ’ (Jo Bachay Hain Sang Samait Lo) ವೆಬ್‌ಸಿರೀಸ್‌ ಅನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ.

ಈ ವೆಬ್‌ಸಿರೀಸ್ ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ ಭಾರತದಲ್ಲಿ ಇದರ ಪ್ರಸಾರಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಕಡೆಯಿಂದ ಈವರೆಗೆ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.

ಈ ಹಿಂದೆಯೇ ಹೊರಬಿದ್ದಿತ್ತು ಸೂಚನೆ

2025ರ ಮೇ 8ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪಾಕಿಸ್ತಾನಿ ಕಂಟೆಂಟ್ ಪ್ರಸಾರಕ್ಕೆ ಸಂಬಂಧಿಸಿದಂತೆ ಸಲಹಾ ಸೂಚನೆ ಹೊರಡಿಸಿತ್ತು. ಪಾಕಿಸ್ತಾನ ಮೂಲದ ವೆಬ್‌ಸಿರೀಸ್, ಸಿನಿಮಾಗಳು, ಹಾಡುಗಳು ಮತ್ತು ಪಾಡ್‌ಕಾಸ್ಟ್‌ಗಳನ್ನು ಪ್ರಸಾರ ಮಾಡದಂತೆ ಡಿಜಿಟಲ್ ವೇದಿಕೆಗಳಿಗೆ ಸೂಚಿಸಲಾಗಿತ್ತು. ಇದೀಗ ಅದೇ ಸೂಚನೆಯ ಪಾಲನೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ.

ಏನಿದು ಹೊಸ ವೆಬ್‌ಸಿರೀಸ್?

‘ಜೋ ಬಚೇ ಹೈ ಸಾಂ ಸಮೇತ್ ಲೋ’ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಆಲ್ ದಿ ಲವ್ ಅವರ್ ಹಾರ್ಟ್ಸ್ ಕ್ಯಾರಿ’ (All the Love Our Hearts Carry) ಎಂಬ ಹೆಸರಿನಲ್ಲೂ ಪ್ರಚಾರವಾಗಿದೆ. ಪಾಕಿಸ್ತಾನದ ಖ್ಯಾತ ಲೇಖಕಿ ಫರ್ಹತ್ ಇಶ್ತಿಯಾಕ್ ಬರೆದ ಇದೇ ಹೆಸರಿನ ಜನಪ್ರಿಯ ಉರ್ದು ಕಾದಂಬರಿಯನ್ನು ಆಧರಿಸಿ ಈ ಪ್ರಣಯ ಕಥೆಯನ್ನು ನಿರ್ಮಿಸಲಾಗಿದೆ.

ಈ ಸರಣಿಯಲ್ಲಿ ಫವಾದ್ ಖಾನ್, ಮಹಿರಾ ಖಾನ್, ಸನಮ್ ಸಯೀದ್, ಅಹದ್ ರಜಾ ಮಿರ್, ಹನಿಯಾ ಆಮಿರ್ ಸೇರಿದಂತೆ ಹಲವು ಪಾಕಿಸ್ತಾನಿ ಕಲಾವಿದರು ನಟಿಸಿದ್ದಾರೆ. ಪಾಕಿಸ್ತಾನ, ಇಟಲಿ ಮತ್ತು ಬ್ರಿಟನ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನೆಟ್‌ಫ್ಲಿಕ್ಸ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಮೂಲಕ ಈ ಸರಣಿಯನ್ನು ನಿರ್ಮಿಸಲಾಗಿದೆ.

ಚಲನಚಿತ್ರ ಕಾರ್ಮಿಕರ ಸಂಘದಿಂದಲೂ ವಿರೋಧ

ಇನ್ನೊಂದೆಡೆ, ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಸಂಘ (AICWA) ಕೂಡ ಈ ವೆಬ್‌ಸಿರೀಸ್ ಪ್ರಸಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ಸರಣಿಯನ್ನು ನೆಟ್‌ಫ್ಲಿಕ್ಸ್‌ನ ಭಾರತೀಯ ಕಂಟೆಂಟ್ ಪಟ್ಟಿಯಿಂದ ತೆಗೆದುಹಾಕುವಂತೆ ಸಂಘ ಒತ್ತಾಯಿಸಿದೆ.

ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನೆಟ್‌ಫ್ಲಿಕ್ಸ್‌ನ ಭಾರತ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಮತ್ತು ದೇಶಾದ್ಯಂತ ಬಹಿಷ್ಕಾರ ಅಭಿಯಾನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.

ಹೀಗಾಗಿ ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ವೆಬ್‌ಸಿರೀಸ್ ಭಾರತದಲ್ಲಿ ಪ್ರಸಾರವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ನ ಅಧಿಕೃತ ನಿರ್ಧಾರಕ್ಕಾಗಿ ಕಾಯಬೇಕಿದೆ.

Leave a Reply

Your email address will not be published. Required fields are marked *