ಬೆಂಗಳೂರು: ವಿಶೇಷ ಸ್ಟ್ರೇ ವೇಕೆನ್ಸಿ ಮುಂದುವರಿದ ಸುತ್ತಿನ ಯುಜಿ ವೈದ್ಯಕೀಯ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಪ್ರಕಟಿಸಿದೆ.
ಈ ಸುತ್ತಿನಲ್ಲಿ ಉಳಿದಿದ್ದ 47 ವೈದ್ಯಕೀಯ ಸೀಟುಗಳ ಪೈಕಿ 20 ಸೀಟುಗಳು ಹಂಚಿಕೆಯಾಗಿವೆ. ಇನ್ನೂ 27 ಸೀಟುಗಳು ಖಾಲಿ ಉಳಿದಿವೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಬಾಕಿ ಶುಲ್ಕ ಪಾವತಿಸಿ ನವೆಂಬರ್ 14ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಎಂಎಸ್ಸಿ ನರ್ಸಿಂಗ್: ಆಯ್ಕೆ ದಾಖಲಿಸಲು ನ.14 ಕೊನೆಯ ದಿನ
ಎಂಎಸ್ಸಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕೆ ಇದುವರೆಗೆ ಯಾವುದೇ ಸೀಟು ಹಂಚಿಕೆಯಾಗದ ಸೇವಾನಿರತ ಮತ್ತು ಸೇವಾನಿರತರಲ್ಲದ ಅಭ್ಯರ್ಥಿಗಳು ನವೆಂಬರ್ 14ರಂದು ಮಧ್ಯಾಹ್ನ 2 ಗಂಟೆಯೊಳಗೆ ತಮ್ಮ ಆಯ್ಕೆಗಳನ್ನು (ಆಪ್ಷನ್ಸ್) ದಾಖಲಿಸಬೇಕು.
ಅಂದು ಸಂಜೆ 6 ಗಂಟೆಯ ನಂತರ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಪಡೆದ ಅಭ್ಯರ್ಥಿಗಳು ನವೆಂಬರ್ 16ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಎಚ್. ಪ್ರಸನ್ನ ತಿಳಿಸಿದ್ದಾರೆ.



One thought on “ಯುಜಿ ವೈದ್ಯಕೀಯ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಇನ್ನೂ 27 ಸೀಟುಗಳು ಖಾಲಿ!”