ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.14ರೊಳಗೆ ಕಾಲೇಜಿಗೆ ವರದಿ ಮಾಡಲು ಸೂಚನೆ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ (PG Medical) ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಇದರೊಂದಿಗೆ ಪ್ರವೇಶ ಪ್ರಕ್ರಿಯೆಯ ಮುಂದಿನ ಹಂತಗಳ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ.

ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ನವೆಂಬರ್ 11ರವರೆಗೆ ತಮ್ಮ ಆಯ್ಕೆಯನ್ನು (Choice) ದಾಖಲಿಸಲು ಅವಕಾಶ ನೀಡಲಾಗಿದೆ. ಚಾಯ್ಸ್-1 ಮತ್ತು ಚಾಯ್ಸ್-2 ದಾಖಲಿಸಿರುವ ಅಭ್ಯರ್ಥಿಗಳು ನವೆಂಬರ್ 11ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ನವೆಂಬರ್ 12ರೊಳಗೆ ಶುಲ್ಕ ಪಾವತಿಸುವಂತೆ ಪ್ರಾಧಿಕಾರ ಸೂಚಿಸಿದೆ.

ಇದನ್ನೂ ಓದಿ: ಸ್ಲೀಪರ್ ರೈಲಿನಲ್ಲಿ ಟಿಕೆಟ್ ಬುಕ್‌ ಮಾಡುವ ಮುನ್ನ ಈ ನಿಯಮಗಳನ್ನು ತಿಳಿಯಿರಿ

ಚಾಯ್ಸ್-1 ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಶುಲ್ಕ ಪಾವತಿಸಿದ ಬಳಿಕ ನವೆಂಬರ್ 13ರೊಳಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ನಂತರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನವೆಂಬರ್ 14ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಇದನ್ನೂ ಓದಿ: ಎಷ್ಟೇ ಸಂಪಾದಿಸಿದರೂ ಹಣ ಉಳಿಯುತ್ತಿಲ್ವಾ? ಮನೆಯಲ್ಲಿ ಈ 4 ವಾಸ್ತು ತಪ್ಪುಗಳಿವೆಯೇ ಪರಿಶೀಲಿಸಿ!

Leave a Reply

Your email address will not be published. Required fields are marked *